ಪ್ರಕಾಶ್​ ರಾಜ್​ ದುಃಖ ಪಟ್ಟು ಭಾರತದಲ್ಲಿ ಇರಬೇಕಾದ ಅವಶ್ಯಕತೆ ಇಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

MP shobha
Published on

ಉಡುಪಿ: ಇಸ್ರೋ ಭಾರತದ ಹೆಮ್ಮೆಯ ಸಂಸ್ಥೆ. ಪ್ರಕಾಶ್​ ರಾಜ್​ ಭಾರತವನ್ನು ಪ್ರೀತಿಸಲ್ಲ. ಅವರಿಗೆ ಭಾರತದ ದುಡ್ಡು ಬೇಕು. ಆದರೆ ಅವರ ಮನಸ್ಸು ಬೇರೆಲ್ಲೂ ಇದೆ. ಇದಕ್ಕಾಗಿ ಅವರು ಚಂದ್ರಯಾನದಂತಹ ವಿಷಯವನ್ನು ಗೇಲಿ, ತಮಾಷೆೆ ಮಾಡುತ್ತಾರೆ. ಇದು ನಮ್ಮ ವಿಜ್ಞಾನಿಗಳಿಗೆ ಮಾಡುತ್ತಿರುವ ಅಪಮಾನ, ಭಾರತಕ್ಕೆ ಮಾಡುತ್ತಿರುವ ಅಪಮಾನ. ಅವರ ಮನಸ್ಸು ಎಲ್ಲಿದೆಯೋ ಅಲ್ಲಿ ಹೋದ್ರೆ ಅವರು ಹೆಚ್ಚು ಆನಂದವಾಗಿರಬಹುದು. ಪ್ರಕಾಶ್​ ರಾಜ್​ ದುಃಖ ಪಟ್ಟುಕೊಂಡು ಭಾರತದಲ್ಲಿ ಇರಬೇಕಾದ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಬುಧವಾರ ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಆವರು, ಪ್ರಪಂಚದ ಹಲವಾರು ದೇಶಗಳ ಅಂತರಿಕ್ಷಾ ಉಡಾವಣೆಗೆ ಇಸ್ರೋ ಸಹಾಯ ಮಾಡಿದೆ. ಇಸ್ರೋಗೆ ಸೌಲಭ್ಯ, ಸೌಕರ್ಯ ಇಲ್ಲ ಅನ್ನುವ ಕಾಲವೊಂದು ಇತ್ತು. ಈಗ ಭಾರತದ ಇಸ್ರೋವನ್ನು ಪ್ರಪಂಚ ಕೊಂಡಾಡುವ ರೀತಿ ಆಗಿದೆ. ಕೆಲವು ಸಂದರ್ಭ ಬೇರೆ ಬೇರೆ ಕಾರಣಗಳಿಗೆ ಫೈಲೂರ್​ ಆಗಬಹುದು, ಪ್ರಧಾನಿಗಳು ವಿಜ್ಞಾನಿಗಳನ್ನು ಉರಿದುಂಬಿಸಿ ಮತ್ತೆ ಹಣ ನೀಡಿದ್ದರು. ಹೀಗಾಗಿ ಮತ್ತೊಮ್ಮೆ ನಮ್ಮ ವಿಜ್ಞಾನಿಗಳು ಈ ಪ್ರಯತ್ನ ಮಾಡಿದ್ದಾರೆ. ಆದರೆ ನಮ್ಮ ದೇಶದಲ್ಲಿ ಇದ್ದು ನಮ್ಮ ಗಾಳಿ ನೀರು ಸೇವಿಸಿ ಅವಹೇಳನ, ಅಪಹಾಸ್ಯ ಮಾಡುತ್ತಾರೆ, ಅವರು ಎಲ್ಲಿದ್ದಾರೆ ಅಂತ ಅವರಿಗೆ ಅವರೇ ಪ್ರಶ್ನೆ ಮಾಡಬೇಕು ಎಂದರು.

ಕಾವೇರಿ ನಮ್ಮ ಜೀವನದಿ, ಬಹುತೇಕ ಭಾಗಗಳಿಗೆ ಕುಡಿಯುವ ನೀರನ್ನು ಕಾವೇರಿ ನದಿ ಒದಗಿಸುತ್ತಿದೆ. ಈ ಬಾರಿ ಮಳೆಯ ಪ್ರಮಾಣ ಕೂಡ ಕಡಿಮೆಯಾಗಿದೆ, ಜನರು ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಮಿಳುನಾಡು ಕೃಷಿಕರಿಗೆ ಹೆಚ್ಚುವರಿ ಬೇಸಾಯಕ್ಕಾಗಿ ನೀರು ಬಿಡುವುದು ಸರಿಯಲ್ಲ, ಮೊದಲ ಅದ್ಯತೆ ಕುಡಿಯುವ ನೀರು, ಆಮೇಲೆ ಬೇಸಾಯ, ರಾಜ್ಯ ಸರ್ಕಾರ ತಮಿಳುನಾಡು ಸರಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು, ಅವರಿಗೆ ನೀರು ಬಿಡುವ ಮೂಲಕ ನಮ್ಮ ಕೃಷಿಕರಿಗೆ ಮೋಸ ಮಾಡಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net