ಜಾತಿರಾಜಕಾರಣ ಹೊರತುಪಡಿಸಿ  ಸಿದ್ದರಾಮಯ್ಯ ರೈತರಿಗಾಗಿ ಏನನ್ನೂ ಮಾಡಿಲ್ಲ

IMG-20230223-WA0004.jpg
Published on

ಬೆಳಗಾವಿ : ಸಿದ್ದರಾಮಯ್ಯ ಅವರು 'ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ್ದೇನೆ, 10-11 ಬಜೆಟ್ ಮಂಡನೆ ಮಾಡಿದ್ದೇನೆ ಎನ್ನುತ್ತಾರೆ. ಆದರೆ, ರೈತರಿಗೆ ಎನೂ ಕೊಟ್ಟಿಲ್ಲ. ಆಡಳಿತಾವಧಿಯಲ್ಲಿ ಜಾತಿವಾದ, ಧರ್ಮದ ರಾಜಕೀಯ ‌ಮಾಡಿದ್ದಾರೆ. ಅಭಿವೃದ್ಧಿ ಮಾಡಿದ್ದರೆ 2018 ರಲ್ಲಿ ಮನೆಗೆ ಹೋಗುವ ಸ್ಥಿತಿ ಬರುತ್ತಿರಲಿಲ್ಲ ಎಂದು ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು,
ರೈತರಿಗೆ, ರಾಜ್ಯದ ಜನರಿಗೆ ಏನಾದರೂ ಕೊಟ್ಚಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ. ಅವರಿಗೆ ಅವಕಾಶ ಸಿಕ್ಕಾಗ ಎನೂ ಮಾಡಿಲ್ಲ, ಓಡಿ ಹೋದರು. ಸಿದ್ದರಾಮಯ್ಯ ಚುನಾವಣಾ ಬಂದಾಗ ಹೀಗೆ ಮಾತನಾಡುತ್ತಾರೆ.
ಅವರು ಒಮ್ಮೆ ಹಿಂದೆ ತಿರುಗಿ ಅವರ ಬೆನ್ಮು ನೋಡಿಕೊಳ್ಳಲಿ ಎಂದರು.‌

ಕೇಂದ್ರ ಸರ್ಕಾರ ರೈತರ ಖಾತೆಯ ಹಣ  ಹಾಕುತ್ತಾ ಬಂದಿದೆ.  ಮಾಜಿ ಸಿಎಂ ಯಡಿಯೂರಪ್ಪ ಜನ್ಮದಿನದ ಹಿನ್ನೆಲೆಯಲ್ಲಿ ಬೆಳಗಾವಿಯಿಂದಲೇ ರೈತರ ಖಾತೆಗೆ ಹಣ ಹಾಕುತ್ತಿರುವುದ ಹೆಮ್ಮೆಯ ವಿಚಾರ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ  ಲೋಕಾರ್ಪಣೆ  ಕಾರ್ಯಕ್ರಮ ಮುಗಿಸಿ ಮೋದಿ ಅವರು ಬೆಳಗಾವಿಗೆ ಬರುತ್ತಾರೆ.‌ ಬೆಳಗಾವಿಯಿಂದ ರೈತ ಖಾತೆಗೆ ಪಿಎಂ ಕಿಸಾನ್ ಯೋಜನೆ  ಯಿಂದ ರೈತರ ಖಾತೆಗೆ ಹಣ ಹಾಕಲಾಗುತ್ತದೆ ಎಂದರು.

ಬೆಳಗಾವಿಯಲ್ಲಿ ಮೋದಿ ಅವತ ರೋಡ್ ಶೋಗೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಿದ್ದತೆ ಮಾಡಿದ್ದಾರೆ. ಆದರೆ, ಎಸ್ಜಿಪಿ ಅವರು ರೋಡ್ ಶೋ ಫೈನಲ್ ಮಾಡುತ್ತಾರೆ.
ಎಸ್ಪಿಜೆ ಅವರು ರೋಡ್ ಶೋ ಯಾವ ಯಾವ ಜಾಗದಲ್ಲಿ ಬರಬೇಕು ಎಂಬುದನ್ನು ನಿರ್ಧಾರ ಮಾಡುತ್ತಾರೆ.
ಅಲ್ಲಿ ವ್ಯವಸ್ಥೆ ಮಾಡುತ್ತೇವೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net