ಹಿಂದಿನ ವರ್ಷದ ರಾಜ್ಯೋತ್ಸವ ಪುರಸ್ಕೃತರ ಹೆಸರು ಓದಿದ‌ ಸಚಿವ ತಂಗಡಗಿ

minister-shivaraja-tangadagi-speeach-koppal-kannada-rajyotsava-programme
Shivaraj tangadagi
Published on

ಕೊಪ್ಪಳ: ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸವಚಿವ ಶಿವರಾಜ ತಂಗಡಗಿ ಅಧಿಕಾರಿಗಳ ಯಡವಟ್ಟಿನಿಂದ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದವರ ಹೆಸರು ಓದಿ ಪೇಚಿಗೆ ಸಿಲುಕಿದರು.

ಹೌದು, ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲೆಯ ಜನರನ್ನು ಉದ್ದೇಶಿಸಿ ಸಚಿವರು ಭಾಷಣ ಮಾಡಿದರು. ಕರ್ನಾಟಕ ಎಂದು ನಾಮಕರಣಗೊಂಡು ಐವತ್ತು ವರ್ಷ ಆದ ಹಿನ್ನಲೆಯಲ್ಲಿ ಸುವರ್ಣ ಸಂಭ್ರಮ ಆಚರಿಸಲಾಗುತ್ತಿದೆ.

ಜಿಲ್ಲೆಯ ತೊಗಲು ಗೊಂಬೆ ಕಲಾವಿದ ಕೇಶಪ್ಪ ಶಿಳ್ಳಿಕ್ಯಾತರ, ಭೂ ದಾನಿ ಹುಚ್ಚಮ್ಮ ಚೌದ್ರಿ ಹಾಗೂ ಹಗಲು ವೇಷ ಕಲಾವಿದ ವಿಭೂತಿ ಗುಂಡಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೇ ಪ್ರಶಸ್ತಿ ನೀಡಿದರೂ ಸಚಿವರ ಭಾಷಣದಲ್ಲಿ ಅವರ ಹೆಸರು ಸೇರಿಸದೇ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ.
ಬದಲಿಗೆ ಕಳೆದ ವರ್ಷ ಪ್ರಶಸ್ತಿ ಪಡೆದ ಶಂಕ್ರಪ್ಪ ಹೊರಪೇಟಿ‌ ಹಾಗೂ ಸಣ್ಣ ರಂಗಪ್ಪ ಚಿತ್ರಗಾರ ಹೆಸರು ಹಾಕಿದ್ದಾರೆ.

ಅವರ ಹೆಸರನ್ನೇ ಸಚಿವ ತಂಗಡಗಿ ಓದಿದರು. ತಕ್ಷಣ ಎಚ್ಚೆತ್ತು ಈ ವರ್ಷ ಮೂವರು ಗಣ್ಯರಿಗೆ ರಾಜ್ಯೋತ್ಸವ ನೀಡಲಾಗಿದೆ ಎಂದು ತಪ್ಪು ಸರಿಪಡಿಸಿದರು. ಆದರೆ, ಅವರ ಹೆಸರು ಹೇಳಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net