

ಕೊಪ್ಪಳ: ಬಿಜೆಪಿಗರು ತಮ್ಮ ಅವಧಿಯಲ್ಲಿ ಸಾಕಷ್ಟು ಹಗರಣ ಮಾಡಿದ್ದಾರೆ. ಅದರ ಬಗ್ಗೆ ಯಾವುದೇ ತನಿಖೆ ನಡೆಸಿಲ್ಲ. ಈಗ ಸಿಎಂ ಮೇಲೆ ಮುಡಾ ಹಗರಣ ಆರೋಪ ಮಾಡುತ್ತಿದ್ದಾರೆ. ಬಿಜೆಪಿಗರು ಹೇಳಿದಂತೆ ಕುಣಿವ ರಾಜ್ಯಪಾಲ ತಾವರಚಂದ ಗೆಹ್ಲೋತ್ ನಿಯಮಬಾಹಿರವಾಗಿ ನೋಟಿಸ್ ನೀಡಿದ್ದಾರೆಂದು ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.
ದೂರು ನೀಡಿದ ಟಿ.ಜೆ.ಅಬ್ರಹಾಂ ಓರ್ವ ಬ್ಲಾಕ್ಮೇಲರ್. ಆತನಿಗೆ ಸುಪ್ರೀಂ ಕೋರ್ಟ್ 20 ಲಕ್ಷ ದಂಡ ಕಟ್ಟುವಂತೆ ಛೀಮಾರಿ ಹಾಕಿದೆ. ಆತ ಬೆಳಗ್ಗೆ ದೂರು ನೀಡಿದ್ದು, ಸಂಜೆ ವೇಳೆಗೆ ಸಿಎಂಗೆ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ಬಿಜೆಪಿಯವರ ಅಣತಿಯಂತೆ ಕುಣಿಸುತ್ತಿದ್ದಾರೆ. ಅವರ ನಡೆಯನ್ನು ರಾಜ್ಯದ ಜನ ಸಹಿಸುವುದಿಲ್ಲವೆಂದು ಶನಿವಾರ ಸುದ್ದಿಗಾರರನ್ನುದ್ದೇಶಿಸಿ ಹೇಳಿದರು.
ಬಿಜೆಪಿ ಅವಧಿಯಲ್ಲಿ ಹಲವು ನಿಗಮಗಳಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಬೊಮ್ಮಾಯಿ ಅವಧಿಯಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ 60 ಕೋಟಿ ರೂ., ಅರಸು ಟ್ರಕ್ ರ್ಟಮಿನಲ್ ನಿಗಮದಲ್ಲಿ 47 ಕೋಟಿ. ಅವ್ಯವಹಾರ ನಡೆದಿದೆ. ಅದರ ಅಧ್ಯಕ್ಷನಾಗಿದ್ದ ವೀರಯ್ಯನನ್ನು ಬಂಧಿಸಿದ್ದೇವೆ. ಈ ಬಗ್ಗೆ ವಿಜಯೇಂದ್ರ, ಆರ್.ಅಶೋಕ್ ಮಾತನಾಡಲಿ. ಸಿದ್ದರಾಮಯ್ಯ ಹಿಂದಿನ ಅವಧಿಯಲ್ಲಿ ಹಲವು ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಿದ್ದರು. ನಾವು ಯಾವ ತನಿಖೆಗೂ ಹೆದರುವುದಿಲ್ಲವೆಂದು ತಿರುಗೇಟು ನೀಡಿದರು.
ಬಿಜೆಪಿಗರು ತಮ್ಮ ಅಧಿಕಾರವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿ ಪಾಪ ಮಾಡಿದ್ದಾರೆ. ಅದರ ಪರಿಹಾರ್ಥವಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ. ನಡೆಸಲಿ. ಇದರಿಂದ ಅವರ ಆರೋಗ್ಯ ಸುಧಾರಿಸುತ್ತದೆ. ನಮಗೆ ಏನೂ ಆಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಪಾರದರ್ಶಕವಾಗಿದ್ದಾರೆ. ಶಿವರಾಜ ತಂಗಡಗಿ. ಹಿಂದುಳಿದ ವರ್ಗ ಹಾಗೂ ಕನ್ನಡ ಮತ್ತು ಸಂಸತಿ ಸಚಿವ.
ಶಿವರಾಜ ತಂಗಡಗಿ. ಹಿಂದುಳಿದ ವರ್ಗ ಹಾಗೂ ಕನ್ನಡ ಮತ್ತು ಸಂಸತಿ ಸಚಿವ.