ಕಕ ಅಭಿವೃದ್ಧಿಗೆ ವಿಶೇಷ ಯೋಜನೆ, ಸಚಿವ ಶಿವರಾಜ ತಂಗಡಗಿ ಭರವಸೆ

minister shivaraj tangadagi kalyana karnataka utsava koppal
Published on

ಕೊಪ್ಪಳ: ಅಂದಿನ ಹೈದ್ರಾಬಾದ್​ ಕರ್ನಾಟಕ ಪ್ರದೇಶ ನಿಜಾಮನ ದಾಸ್ಯದಿಂದ ಬಿಡುಗಡೆ ಹೊಂದಿದ ಈ ಸುದಿನವನ್ನು ಕಲ್ಯಾಣ ಕರ್ನಾಟಕ ಉತ್ಸವವಾಗಿ ಆಚರಿಸುತ್ತಿದ್ದೇವೆ. ನಮಗೆಲ್ಲ ಸ್ವಾತಂತ್ರ್ಯ ಸಿಕ್ಕು 76 ವರ್ಷಗಳಾಗಿದ್ದು, ಇದಕ್ಕೆ ಕಾರಣರಾದ ಎಲ್ಲರನ್ನು ನೆನೆಯಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಿಜಾಮನ ಆಡಳಿತದಲ್ಲಿ ಜನರಿಗೆ ವಾಕ್​, ಸಂಟನೆ, ಪತ್ರಿಕಾ ಸ್ವಾತಂತ್ರ$್ಯವಿರಲಿಲ್ಲ. ಕಾಶಿಂ ರಿಜ್ವಿ ಎಂಬ ಮತಾಂಧನ ನೇತೃತ್ವದ ರಜಾಕರ ಪಡೆ ಸಾಮಾನ್ಯರನ್ನು ಇನ್ನಿಲ್ಲದಂತೆ ಕಾಡಿತು. ಇದನ್ನು ಸಹಿಸದ ಸ್ವಾಮಿ ರಮಾನಂದ ತೀರ್ಥರು ಹೈಕ ವಿಮೋಚನಾ ಹೋರಾಟ ಆರಂಭಿಸಿದರು. ಕೊಪ್ಪಳದಲ್ಲಿ ಶಿವಮೂರ್ತಿ ಸ್ವಾಮಿ ಅಳವಂಡಿ, ಪುಂಡಲಿಕಪ್ಪ ಜ್ಞಾನಮೋಠೆ, ವೀರಭದ್ರಪ್ಪ ಶಿರೂರು, ಸಿ.ಎಂ. ಚುರ್ಚಿಹಾಳ ಮಠ, ಸೋಮಪ್ಪ ಡಂಬಳ, ಯರಾಶಿ ಶಂಕ್ರಪ್ಪ, ಎಂ. ವಿರುಪಾಕ್ಷಪ್ಪ ಹೀಗೆ ಅನೇಕರ ತ್ಯಾಗ&ಬಲಿದಾನ ಲವಾಗಿ 1948ರ ಸೆ.17ರಂದು ನಮಗೆಲ್ಲ ಸ್ವಾತಂತ್ರ್ಯ ದೊರೆಯಿತು ಎಂದರು.

ರಾಜ್ಯ ಸರ್ಕಾರ ಕಕ ಭಾಗದ ಅಭಿವೃದ್ಧಿಗೆ ವಿಶೇಷ ಯೋಜನೆ ಜಾರಿ ಮಾಡಿದೆ. ಕೆಕೆಆರ್​ಡಿಬಿ ಸ್ಥಾಪಿಸಿ ಅನುಷ್ಠಾನ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಜಿಲ್ಲೆಯ ಜನತೆಗೆ ವರವಾಗಿವೆ. ತೋಟಗಾರಿಕೆ, ರೈಸ್​ ಟೆಕ್​ ಪಾರ್ಕ್​ ಸೇರಿ ಅನೇಕ ಪ್ರಗತಿ ಯೋಜನೆ ಹಾಕಿಕೊಳ್ಳಲಾಗಿದೆ. ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಹೆಚ್ಚುವರಿ ಹಾಸ್ಟೆಲ್​ ಮಂಜೂರಾಗಿವೆ. ಕೆಕೆಆರ್​ಡಿಬಿಯಿಂದ ಬಂಡಿ, ಬಳಗೇರಾ, ಚಿಕ್ಕ ಮ್ಯಾಗೇರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾಗಿವೆ. ವಿವಿಧ ಇಲಾಖೆಗಳ ಮೂಲಕ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ವಿವಿಧ ತುಕಡಿಗಳು ಗೌರವ ವಂದನೆ ಸಲ್ಲಿಸಿದವು. ಮಕ್ಕಳ ಸಾಂಸತಿಕ ಕಾರ್ಯಕ್ರಮ ಗಮನ ಸೆಳೆದವು. ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ಡಿಸಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಸ್ಪಿ ಡಾ.ರಾಮ್​.ಎಲ್​.ಅರಸಿದ್ದಿ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net