ಬಿಎಸ್ವೈ ಹೆಸರಲ್ಲೇ ಪಕ್ಷ ಮುಂದುವರಿಕೆ: ತಂಗಡಗಿ

minister-shivaraj-tangadagi-congress-bjp-central govt dont give droughts relief
Minister Shivaraj Tangadagi
Published on

ಕೊಪ್ಪಳ: ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡಿರುವುದರಿಂದ ಕಾಂಗ್ರೆಸ್ ಗೆ ಯಾವುದೇ ನಷ್ಟವಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

ನಮಗೆ ಯಾರಿಂದಲೂ ನಷ್ಟವಿಲ್ಲ. ವಿಜಯೇಂದ್ರ ಆಯ್ಕೆಯಿಂದ ಬಿಜೆಪಿಗೇ ನಷ್ಟವಾಗಲಿದೆ. ಅವರಲ್ಲೇ ಅಸಮಾಧಾನ ಸೃಷ್ಟಿಯಾಗಿದೆ. ಕೆಲ ನಾಯಕರು ಪದಗ್ರಹಣ ಕಾರ್ಯಕ್ರಮಕ್ಕೆ ತೆರಳುವುದಿಲ್ಲ ಎಂದಿದ್ದಾರೆ.

ಅವರ ಅಧ್ಯಕ್ಷ ಹಾದಿ ಸುಗಮವಾಗಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿಲ್ಲ. ಕಾಂಗ್ರೆಸ್ ನವರು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡುವ ಯೋಗ್ಯತೆ ಇಲ್ಲವೆಂದು ಅಸಹ್ಯ ಮಾಡಿದ್ದಕ್ಕೆ ಸದ್ಯ ವಿಜಯೇಂದ್ರರನ್ನು ಮಾಡಿದ್ದಾರೆ ಎಂದು ಕುಟುಕಿದರು.

ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್ ಇದ್ದರು.

10-15 ಶಾಸಕರು ಕಾಂಗ್ರೆಸ್ ಗೆ: ಬಿಜೆಪಿ, ಜೆಡಿಎಸ್ ನಾಯಕರು ಹತಾಶರಾಗಿದ್ದಾರೆ. ಮನಬಂದಂತೆ ಮಾತನಾಡುತ್ತಿದ್ದಾರೆ. ಜಗದೀಶ ಶೆಟ್ಟರ್ ಹಿರಿಯ ನಾಯಕರು. ಅವರಿಗೆ ಅವಮಾನ ಮಾಡಿ ಪಕ್ಷ ಬಿಡುವಂತೆ ಮಾಡಿದ್ದಾರೆ.

ಅವರು ಮತ್ತೆ ಬಿಜೆಪಿಗೆ ಹೋಗುವುದಿಲ್ಲ. ಬದಲಿಗೆ ಬಿಜೆಪಿ, ಜೆಡಿಎಸ್ ನ ಸುಮಾರು 10-15 ಶಾಸಕರು ಕಾಂಗ್ರೆಸ್ ಗೆ ಬರ್ತಾರೆ. ಆದರೆ, ನನ್ನ ಸಂಪರ್ಕದಲ್ಲಿ ಯಾರೂ ಇಲ್ಲ. ಸಮಯ ಬಂದಾಗ ಯಾರ್ಯಾರು ಬರುತ್ತಾರೆ ಎಂದು ಬಹಿರಂಗ ಮಾಡುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net