ಭಾರತ-ಪಾಕ್ ಯುದ್ಧ, ಅಮೇರಿಕಾ ಮಧ್ಯ ಪ್ರವೇಶ ಸರಿಯಲ್ಲ ಎಂದ ಸಚಿವ ಶಿವಾನಂದ ಪಾಟೀಲ

VJP SHIVANANDA PATIL PRESS MEET
Published on

ವಿಜಯಪುರ: ಭಾರತ ಸಾರ್ವಭೌಮ ರಾಷ್ಟ್ರ. ಯಾವುದೇ ನಿರ್ಣಯ ಕೈಗೊಳ್ಳಲು ಸರ್ವ ಸ್ವತಂತ್ರ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ದದಲ್ಲಿ ಅಮೇರಿಕಾ ಮಧ್ಯ ಪ್ರವೇಶ ಸರಿಯಲ್ಲ ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ, ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನವನ್ನು ಸೋಲಿಸುವುದು ಭಾರತಕ್ಕೆ ದೊಡ್ಡ ಕೆಲಸವೇ ಅಲ್ಲ. ಹಿಂದೆ ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿರುವ ಭಾರತೀಯ ಸೈನಿಕರಿಗೆ ಮೂರನೇ ಬಾರಿಗೆ ಸೋಲಿಸುವುದು ಕಷ್ಟವೇ ? ಎಂದು ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.

ಪಾಕ್ ಕದನ ವಿದಾಮ್ ಉಲ್ಲಂಘನೆ ವಿಚಾರದಲ್ಲಿ ಸರ್ವಪಕ್ಷ ನಿಯೋಗ ಪ್ರಧಾನಿಗಳಿಗೆ ಒತ್ತಾಯ ಮಾಡಿದೆ. ಸೀಸ್ ಫೈರ್ ಮಾಡುವುದಾದರೆ ಅಧಿವೇಶನ ಕರೆಯಬೇಕು, ಸೀಸ್ ಫೈರ್ ಮಾಡದಿದ್ದರೆ ಅಧಿವೇಶನ ಕರೆಯಬೇಡಿ. ಇಲ್ಲದಿದ್ದರೆ ವಾರ್ ಆದ್ರೂ ಮಾಡಿ ಎಂದರು.

ಯಾವುದೇ ಒಂದು ನಿಷ್ಕರ್ಷಕ್ಕೆ ಬರದೇ, ಬೇರೆ ಯಾರೋ ಹೇಳಿದರೆ ಅದಕ್ಕೊಂದು ಕಂಡಿಷನ್ ಇರಬೇಕು. ಅಮೇರಿಕಾದವರು ಇಂಟರ್ ಫಿಯರ್ ಮಾಡಿದ್ದಾರೆ. ಕಾಶ್ಮೀರ ವಿಷಯ ಇಟ್ಟುಕೊಂಡು ನಿಮ್ಮ ಇಂಟರ್ ಫೈರ್ ಮಾಡುವುದಾದರೆ ಸೀಸ್ ಫೈರ್ ಮಾಡಬಾರದಿತ್ತು. ಷರತ್ತು ರಹಿತವಾಗಿದ್ದರೆ ಮಾತ್ರ ಯುದ್ಧ ವಿರಾಮ ಘೋಷಿಸುವ ಮಾತುಕತೆಗೆ ಬರುತ್ತೇವೆ ಎಂದಿದ್ದರೆ ಅದು ಸೂಕ್ತವಾಗಿತ್ತು. ಅದನ್ನೆ ವಿರೋಧ ಪಕ್ಷದವರು, ದೇಶದ ಜನ ಕೇಳುತ್ತಿರುವುದು. ಸರ್ವ ಪಕ್ಷಗಳ ಸಭೆ ಕರೆದಲ್ಲಿ ಅನೇಕ ವಿಷಯಗಳು ಚರ್ಚೆ ಆಗಲಿವೆ. ಆದರೆ ಮೋದಿ ಅವರು ಸಮರ್ಪಕ ಉತ್ತರ ಕೊಟ್ಟರೆ ಎಲ್ಲರೂ ಒಪ್ಪಿಕೊಳ್ಳಬಹುದು, ಇರದಿದ್ದರೆ ವಿಮರ್ಶೆ ಆಗಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net