ಕಾಂಗ್ರೆಸ್ ಮುಖಂಡರೊಂದಿಗೆ ಸಚಿವ ಜಾರಕಿಹೊಳಿ ಚರ್ಚೆ

IMG-20231129-WA0021.jpg
Published on

ಹುಬ್ಬಳ್ಳಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಬುಧವಾರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಉಣಕಲ್ ಗ್ರಾಮದ ಕಾಂಗ್ರೆಸ್ ಮುಖಂಡರು ಭೇಟಿ ಮಾಡಿ ಚರ್ಚಿಸಿದರು.

ಮುಖಂಡರಾದ ಕಲ್ಲಪ್ಪ ವಾಲಿಕಾರ್ ಅವರ ಮನೆಗೆ ಅನೌಪಚಾರಿಕ ಭೇಟಿ ನೀಡಿದ ಸಚಿವರೊಂದಿಗೆ ನಗರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಾಯಿತು. ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಕಾಂಗ್ರೆಸ್ ಪಕ್ಷದ ಪಾಲಿಗೆ ಮಹತ್ವದ್ದಾಗಿರುವ ಹು-ಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯ ಉಣಕಲ್ ಗ್ರಾಮಕ್ಕೆ ಸಚಿವರು ಭೇಟಿ ನೀಡಿದ್ದು ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿತು.

ನೆಚ್ಚಿನ ನಾಯಕ ಜಾರಕಿಹೊಳಿ ಅವರನ್ನು ಪಕ್ಷದ ಸ್ಥಳಿಯ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಿರೇಶ ಉಂಡಿ, ರಜತ್ ಉಳ್ಳಾಗಡ್ಡಿಮಠ, ಪ್ರಕಾಶ ಹೆಸರೂರ, ಅನಿಲ ಪಾಟೀಲ, ಅಲ್ತಾಫ್ ಹಳ್ಳೂರ, ಸದಾನಂದ ಡಂಗನವರ, ದಾನಪ್ಪ ಕಬ್ಬೇರ್, ಪಾಲಿಕೆ ಪ್ರತಿಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲ, ಕವಿತಾ ಕಬ್ಬೇರ, ಚೇತನ ಹಿರೇಕೆರೂರ, ಮೋಹನ ಹಿರೇಮನಿ, ಶಿವಾನಂದ ಬೆಂತೂರ, ಹಿರಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net