ಪುತ್ರಿ ಪ್ರಿಯಾಂಕಾ ಸ್ಫರ್ಧೆ ಕುರಿತು ಸಚಿವ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದೇನು ಗೊತ್ತಾ?

IMG_satish_Jarkiholi.jpg_4_1_5TAG0GKR.webp
Published on

ಬೆಳಗಾವಿ : ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಅವರು ಸ್ಪರ್ಧೆ ಮಾಡುವ ಕುರಿತು ಈಗಲೇ ಹೇಳಲಾಗದು.  ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಕುರಿತು ಇನ್ನೊಂದು ತಿಂಗಳಲ್ಲಿ ಸಭೆ ನಡೆಸಲಾಗುತ್ತದೆ. ಎಲ್ಲವನ್ನು ಪಕ್ಷದ ಮುಖಂಡರು ತೀರ್ಮಾನಿಸುತ್ತಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ್ನು ಜಿಲ್ಲಾ ಉಸ್ತುವಾರಿಗಳ ಹಂಚಿಕೆ ಆಗಿಬೇಕಿದೆ. ಅಂತೆಯೇ ಲೋಕಸಭೆ ಚುನಾವಣೆ ಕುರಿತಾಗಿ ಕಾಂಗ್ರೆಸ್ ನಾಯಕರು ಸಭೆ ನಡೆಸಿ, ತಿರ್ಮಾನಿಸಿದ ಬಳಿಕವೇ ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತೇವೆ. ಸಬೆಗೂ ಮುನ್ನ ಯಾರು ಪ್ರಚಾರ ಮಾಡಲು ಆಗುವುದಿಲ್ಲ ಎಂದರು.

ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ

ಇನ್ನು  ಕೃಷ್ಣಾ, ಭೀಮಾ ನದಿಗೆ  ಮಹಾರಾಷ್ಟ್ರದಿಂದ ಮೊನ್ನೆಯಷ್ಟೇ ನೀರು ಬಿಟ್ಟಿದ್ದಾರೆ, ಇನ್ನೊಂದು ವಾರದಲ್ಲಿ ಮಳೆ ಆಗಲಿದೆ ಎಂದ ಅವರು, ಬಳ್ಳಾರಿ ನಾಲಾ ಹೂಳೆತ್ತಿ ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹಿಸುತ್ತಿರುವುದು ಗಮನಕ್ಕಿದೆ. ಆದರೆ, ಮಳೆಗಾಲದಲ್ಲಿ ಆಗುವ ಅನಾಹುತ ತಡೆಯಲು ಆಗಲ್ಲ. ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಧಾರವಾಡವರೆಗೆ ಮಾತ್ರ ಸಂಚರಿಸುತ್ತಿರುವ ಕುರಿತು ಕೇಂದ್ರ ಸಚಿವ ಪ್ರಹ್ಲದ ಜೋಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಅವರು, ಅದನ್ನು ಬೆಳಗಾವಿ -ಮುಂಬೈ ಮಧ್ಯೆಯಾದರೂ ಓಡಿಸಲಿ ಎಂದು ಒತ್ತಾಯಸಲಾಗುವುದು ಎಂದು ಹೇಳಿದರು.
ಬೆಳಗಾವಿ ವಿಮಾನ ನಿಲ್ದಾಣ ಅತ್ಯುತ್ತಮವಾಗಿ ನಡೆಯುತ್ತಿತ್ತು. ಆದರೆ, ಕೇಂದ್ರದ ಬಿಜೆಪಿ ಮಂತ್ರಿಯೊಬ್ಬರಿಂದ ಇಲ್ಲಿನ ವಿಮಾನಗಳು ಹುಬ್ಬಳ್ಳಿ ಗೆ ಶಿಫ್ಟ್ ಆಗಿವೆ. ಅಲ್ಲದೇ ಅನೇಕ ವಿಮಾನಗಳು ಬಂದ್ ಆಗಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net