

ಧಾರವಾಡ: ಹುಬ್ಬಳ್ಳಿ- ಧಾರವಾಡ ಅವಳಿನಗರ ನಡುವಿನ ಎಚ್‌ಡಿಬಿಆರ್‌ಟಿಎಸ್ ಮಾರ್ಗದಲ್ಲಿನ ಅಡಚಣೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಶನಿವಾರ ಪರಿಶೀಲಿಸಿದರು.
ಹುಬ್ಬಳ್ಳಿ¬ಂದ ಧಾರವಾಡದವರೆಗೆ ಬಿಆರ್‌ಟಿಎಸ್ ಮಾರ್ಗದಲ್ಲಿನ ಸಮಸ್ಯೆಗಳನ್ನು ಅರಿಯುವ ನಿಟ್ಟಿನಲ್ಲಿ ಚಿಗರಿ ಬಸ್‌ನಲ್ಲಿ ಸಂಚರಿಸಿದರು. ಹುಬ್ಬಳ್ಳಿಯ ಹೊಸೂರ ವೃತ್ತದಿಂದ ಧಾರವಾಡದ ಜ್ಯುಬಿಲಿ ಸರ್ಕಲ್‌ವರೆಗೆ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆಗಳನ್ನು ಪರಿಶೀಲಿಸಿದರು.
ಹೊಸೂರ ಸರ್ಕಲ್, ಉಣಕಲ್ಲ ಮತ್ತು ನವಲೂರ ಬಳಿಯ ಸೇತುವೆಗಳ ಗುಣಮಟ್ಟ, ಮಿಶ್ರವಾಹನ ಸಂಚಾರದಲ್ಲಿ ಆಗುತ್ತಿರುವ ತೊಂದರೆಗಳು, ಶೌಚಗೃಹ, ಕುಡಿಯುವ ನೀರು ಒದಗಿಸುವ ಸಾಧ್ಯತೆಗಳು, ಬಿಆರ್‌ಟಿಎಸ್ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸಚಿವರು ಅರಿಯುವ ಯತ್ನ ಮಾಡಿದರು.
ಬಿಆರ್‌ಟಿಎಸ್, ಪೊಲೀಸ್ ಮತ್ತು ಕೆಆರ್‌ಡಿಸಿಎಲ್ ಸೇರಿ ಸಂಬ0ಧಿಸಿದ ಇಲಾಖೆಗಳ ಮಧ್ಯೆ ಸಮನ್ವಯ ಸಾಽಸಲು ಸಭೆ ಆಯೋಜಿಸುವಂತೆ ಅಽಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಈಗಿರುವ ಪರಿಸ್ಥಿತಿಯಲ್ಲಿ ಅವಳಿನಗರದ ಮಧ್ಯೆ ಸಂಚರಿಸುವ ಖಾಸಗಿ ವಾಹನಗಳ ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಮಗ್ರ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿ.ಪಂ. ಸಿಇಒ ಭುವನೇಶ ಪಾಟೀಲ, ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾ0ಗಾ ಎಂ., ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ಕಡಿ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಕೆಆರ್‌ಡಿಸಿಎಲ್ ಅಽಕಾರಿಗಳು, ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ, ಪದಾಽಕಾರಿಗಳಾದ ಶರಣಗೌಡ ಗಿರಡ್ಡಿ, ಮಂಜುನಾಥ ನೀರಲಕಟ್ಟಿ, ವೆಂಕಟೇಶ ರಾಯ್ಕರ್, ಸಂತೋಷ ಪಟ್ಟಣಶೆಟ್ಟಿ, ಮಂಜುನಾಥ ಭೋವಿ, ಪುಂಡಲೀಕ ತಳವಾರ, ಸುರೇಖಾ ಪೂಜಾರ, ಬಸವರಾಜ ಪೊಮೋಜಿ, ಮಂಜುನಾಥ ನಡಟ್ಟಿ, ರಾಜೇಶ ಮನಗುಂಡಿ, ಬಿ.ಎಂ. ಕೇದಾರನಾಥ, ಇತರರಿದ್ದರು.