ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ

12 Dwd 9
Published on

ಧಾರವಾಡ: ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ ಪಡಬೇಕು. ವಿದ್ಯಾರ್ಥಿಗಳಾದವರು ನಿಮಗೆ ನೀವೇ ಉತ್ತೇಜಕರು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಕರ್ನಾಟಕ ಕಲಾ ಕಾಲೇಜಿನ ಜಿಮಖಾನಾ ವಿಭಾಗವು ಸೃಜನಾ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ನಗದು ಬಹುಮಾನ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಇಂದು ಸಮಾಜದಲ್ಲಿ ಯಶಸ್ಸು ಎಂದರೆ ಕೇವಲ ಹಣ ಗಳಿಕೆ ಅಲ್ಲ. ಜನರು ಗುರುತಿಸಲ್ಪಡುವಂತೆ ಇರುವುದು ನಿಜವಾದ ಸಾಧನೆ. ಸಮಾಜದ ಬದಲಾವಣೆಗೆ ಇಂದಿನ ಯುವ ಸಮುದಾಯ ಪೂರಕವಾಗಿ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಮಾತನಾಡಿ, ಪ್ರತಿಭೆ ಬೆಳೆಯಲು ಪುರಸ್ಕಾರ ಬಹಳ ಮುಖ್ಯ. ಡಾ. ಬಿ.ಆರ್. ಅಂಬೇಡ್ಕರ್ ಅವರ ಶೈಕ್ಷಣಿಕ ಪ್ರತಿಭೆಗೆ ಶಾಹು ಮಹಾರಾಜರು ಉತ್ತೇಜಿಸಿದರು. ಯಶಸ್ಸಿಗೆ ಯಾವುದೇ ಅಡ್ಡ ಮಾರ್ಗ ಇಲ್ಲ ಎಂದರು.
ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ, ಜಿಮಖಾನಾ ಕಾರ್ಯಧ್ಯಕ್ಷೆ ಡಾ. ಎಂ.ಆರ್. ಹಿರೇಮಠ, ಉಪಾಧ್ಯಕ್ಷೆ  ಡಾ. ಮಂಜುಳಾ ಚಲವಾದಿ, ಡಾ. ಎಂ.ಬಿ. ದಳಪತಿ, ವಿದ್ಯಾರ್ಥಿ ಸಾಂಸ್ಕೃತಿಕ ಕಾರ್ಯದರ್ಶಿ ಕವನಾ ಬಿಂದಲಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net