

ಧಾರವಾಡ: ಅಲ್ಲಿ ಎಲ್ಲರೂ ಸಮಸ್ಯೆಗಳನ್ನು ಹೊತ್ತು ಬಂದವರು. ಒಬ್ಬೊಬ್ಬರದು ಒಂದೊ೦ದು ಬಗೆಯ ಸಮಸ್ಯೆ. ಸಚಿವರು, ಶಾಸಕರನ್ನು ಖುದ್ದು ಭೇಟಿ ಮಾಡಿ ಅಹವಾಲು ಸಲ್ಲಿಸುವ ತವಕ ಎಲ್ಲರದಾಗಿತ್ತು. ಹೀಗಾಗಿ ಒಂದು ಹಂತದಲ್ಲಿ ನೂಕುನುಗ್ಗಲು ಏರ್ಪಟ್ಟಿತ್ತು. ಸಚಿವ ಸಂತೋಷ ಲಾಡ್, ಜಿಲ್ಲಾಧಿಕಾರಿ, ಪೊಲೀಸ್ ಅಽಕಾರಿಗಳು ಎಷ್ಟೇ ಹೇಳಿದರೂ ಸಾರ್ವಜನಿಕರು ಕೇಳುವ ಹಂತದಲ್ಲಿರಲಿಲ್ಲ.
ಇದು ಕಂಡುಬ೦ದಿದ್ದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ನಗರದ ಸೃಜನಾ ರಂಗಮ೦ದಿರದಲ್ಲಿ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜನತಾ ದರ್ಶನದಲ್ಲಿ.
ಸಚಿವ ಲಾಡ್ ನೇತೃತ್ವದಲ್ಲಿ ಎಲ್ಲ ಇಲಾಖೆಗಳ ಅಽಕಾರಿಗಳು ಇದ್ದುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ವೈಯಕ್ತಿಕ, ಸಂಘ- ಸಂಸ್ಥೆ, ಗ್ರಾಮ, ನಗರ ಪ್ರದೇಶಗಳ ಜನ ಅರ್ಜಿ ಸಮೇತ ಸಮಸ್ಯೆಗಳನ್ನು ಹೇಳಿ ಅಹವಾಲು ಸಲ್ಲಿಸಿದರು.
ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅಹವಾಲು ಸಲ್ಲಿಕೆಗೆ ಅವಕಾಶ ಕಲ್ಪಿಸಲಾಯಿತು. ಜನ ಏಕಾಏಕಿ ವೇದಿಕೆಗೆ ಏರಲು ಮುಂದಾಗಿದ್ದರಿ೦ದ ನೂನುನುಗ್ಗಲು ಏರ್ಪಟ್ಟಿತು. ಒಂದು ಹಂತದಲ್ಲಿ ಸಚಿವ ಲಾಡ್ ವೇದಿಕೆ ಮುಂಭಾಗಕ್ಕೆ ಬಂದು `ದಯವಿಟ್ಟು ಶಾಂತವಾಗಿರಿ. ಎಲ್ಲರ ಅಹವಾಲುಗಳನ್ನು ಸ್ವೀಕರಿಸಲಾಗುವುದು. ಗದ್ದಲ ಮಾಡದೆ ಸರದಿಯಲ್ಲಿ ಬರಬೇಕು' ಎಂದು ಮನವಿ ಮಾಡಿದರು. ಮಧ್ಯಾಹ್ನದವರೆಗೆ ನಡೆದ ಕಾರ್ಯಕ್ರಮದಲ್ಲಿ 430 ಅರ್ಜಿಗಳನ್ನು ಸ್ವೀಕರಿಸಲಾಯಿತು. ಸಂಬ೦ಧಪಟ್ಟ ಇಲಾಖೆಗಳ ಅಽಕಾರಿಗಳನ್ನು ಕರೆದು ಸೂಕ್ತ ಕ್ರಮ ಜರುಗಿಸುವಂತೆ ಸಚಿವ ಲಾಡ್ ಸೂಚಿಸಿದರು.
ಶಾಸಕರಾದ ಎನ್.ಎಚ್. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ, ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪ ಟಿ.ಕೆ., ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಽಕಾರಿಗಳು, ತಹಸೀಲ್ದಾರರು ಇದ್ದರು.