

ಧಾರವಾಡ: ಕಾಂಗ್ರೆಸ್ ಸರ್ಕಾರ ನೀಡಿದ್ದ ಗ್ಯಾರಂಟಿಗಳ ಈಡೇರಿಕೆಗೆ ಬದ್ಧವಾಗಿದ್ದು, ನುಡಿದಂತೆ ನಡೆಯುತ್ತಿದೆ. ಗೃಹಜ್ಯೋತಿ ಯೋಜನೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಜಿಲ್ಲೆಯಲ್ಲಿ ಇದುವರೆಗೆ ಶೇ. ೯೪ರಷ್ಟು ಜನ ಗೃಹಜ್ಯೋತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. 5.20 ಲಕ್ಷ ಗ್ರಾಹಕರಲ್ಲಿ 4.20 ಲಕ್ಷ -Àಲಾನುಭವಿಗಳಾಗಿದ್ದಾರೆ. ಉಳಿದವರೂ ಶೀಘ್ರ ನೋಂದಣಿ ಮÁಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಸೃಜನಾ ರಂಗಮAದಿರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮನೆಯ ವಿದ್ಯುದ್ದೀಪವನ್ನು ಬೆಳಗಿಸುವ ಮೂಲಕ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸುಮÁರು 60,000 ಕೋಟಿ ರೂ. ವೆಚ್ಚದಲ್ಲಿ ಪಂಚ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಗೃಹಜ್ಯೋತಿ, ಉಚಿತ ಪಡಿತರ ವಿತರಣೆ ಮತ್ತು ಉಚಿತ ಬಸ್ ಪ್ರಯಾಣ ಯೋಜನೆಗಳು ಆರಂಭಗೊAಡಿವೆ. ಯುವನಿಽ, ಗೃಹಲಕ್ಷಿ÷್ಮÃ ಯೋಜನೆ ಕೂಡ ಆರಂಭವಾಗಲಿವೆ. ಆದರೂ ಬಿಜೆಪಿಯವರು ಆರೋಪ ಮÁಡುವುದನ್ನು ಬಿಡುತ್ತಿಲ್ಲ. ನಾವು ಕೊಡುತ್ತಿರುವ ಅಕ್ಕಿಯನ್ನು ಮೋದಿ ಅಕ್ಕಿ ಎಂದು ಆರೋಪ ಮÁಡಿದರು. ಆದರೆ, ಅದು ಮೋದಿ ಅಕ್ಕಿಯಲ್ಲ. ಅದಕ್ಕೆ ಬೇಕಾದ ಆಹಾರ ಭದ್ರತೆ ಕಾಯ್ದೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಸಿದ್ದರಾಮಯ್ಯನವರು ಬಡ್ಡಿ ರಹಿತ ಸಾಲ ಆರಂಭಿಸಿದ್ದರು. ೨೦೧೩ರಿಂದ ೧೮ರವರೆಗೆ ಇದ್ದ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮÁಡಿದೆ. ಈ ಅವಽಯಲ್ಲಿ ೫ ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಸಾಲ ಕೊಡಲಿದ್ದೇವೆ ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ, ಹೆಸ್ಕಾA ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ ರೋಷನ್ ಪ್ರಾಸ್ತಾವಿಕವಾಗಿ ಮÁತನಾಡಿದರು. ಜಿಲ್ಲಾಽಕಾರಿ ಗುರುದತ್ತ ಹೆಗಡೆ, ಹೆಸ್ಕಾಂ ಅಽಕಾರಿಗಳಾದ ಶ್ರೀಕಾಂತ ಸಸಾಲಟ್ಟಿ, ಎಸ್. ಜಗದೀಶ, ಪ್ರಕಾಶ ಪಾಟೀಲ, ರಮೇಶ ಬೆಂಡಿಗೇರಿ, ಶರಣಮ್ಮ ಜಂಗಿನ, ಎಂ.ಟಿ. ದೊಡ್ಡಮನಿ, ಜಯಪ್ರದಾ ಪೂಜಾರ, ಇತರರಿದ್ದರು.
ಗೃಹಜ್ಯೋತಿ ಯೋಜನೆಯ ಜನಜಾಗೃತಿಗಾಗಿ ಹೆಸ್ಕಾಂ ನೌಕರರ ತಂಡ `ಝೀರೊ ಬಿಲ್' ಕಿರುನಾಟಕ ಪ್ರದರ್ಶಿಸಿತು.