ಸಚಿವ ಸಿ.ಟಿ.ರವಿ ಅವರಿಂದ ಚಿಕ್ಕಮಗಳೂರು ಜಿಲ್ಲೆಯ ಕವಿಗಳ ಸ್ಮರಣೆ

ct ravi
Published on

ಚಿಕ್ಕಮಗಳೂರು: ರಾಜರ ಆಸ್ಥಾನ ಕಾಲದಿಂದ ಆರಂಭವಾಗಿ ಸಾರಸ್ವತ ಲೋಕದ ದಿಗ್ಗಜರಲ್ಲಿ ಕನ್ನಡ ನಾಡು-ನುಡಿಗೆ ಕೊಡುಗೆ ನೀಡಿದ ಜಿಲ್ಲೆಯ ಕವಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ರಾಜ್ಯೋತ್ಸವ ಸಂದೇಶದ ವೇಳೆ ನೆನಪಿಸಿಕೊಂಡರು.

ಕನ್ನಡದಲ್ಲಿ ಕಾವ್ಯ ಬರೆದ ಹೆಗ್ಗಳಿಕೆಯ ಮೊದಲ ಬ್ರಾಹ್ಮಣ ಕವಿ ಹಾಗೂ ಹೊಯ್ಸಳ ಚಕ್ರವರ್ತಿಯ ಆಸ್ಥಾನ ಕವಿ ರುದ್ರಭಟ್ಟ, ಜನಸಾಮಾನ್ಯರ ಹೃದಯ ಗೆದ್ದ ಕವಿ ಲಕ್ಷ್ಮೀಶ ಇಬ್ಬರೂ ನಮ್ಮ ದೇವನೂರಿನವರು. ಶಿವಶರಣೆ ಮಾತೆ ಅಕ್ಕನಾಗಮ್ಮ, ಶರಣ ನುಲಿಯ ಚಂದಯ್ಯ ಕೊನೆಯ ದಿನಗಳನ್ನು ಕಳೆದಿದ್ದು ತರೀಕೆರೆಯ ಪರಿಸರದಲ್ಲಿ ಎಂದು ಹೇಳಿದರು.

ಅಶ್ವಿನಿ ದೇವತೆಗಳಲ್ಲಿ ಒಬ್ಬರಾದ ಅಂಬಳೆಯ ಎ.ಆರ್.ಕೃಷ್ಣಶಾಸ್ತ್ರಿ, ಮಹಾಕಾವ್ಯಗಳನ್ನು ರಚಿಸಿದ ಮಲ್ಲಿಕಾ ಕಡಿದಾಳ್, ಕಾಶಿ ವಿಶ್ವನಾಥ ಶೆಟ್ಟರು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎಚ್.ಎಲ್.ನಾಗೇಗೌಡ, ವಿ.ಸೀತಾರಾಮಯ್ಯ ಮುಂತಾದವರು ನಮ್ಮ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಹಿರೇಮಗಳೂರು ಕಣ್ಣನ್ ಕನ್ನಡದ ಸಾಂಸ್ಕøತಿಕ ರಾಯಭಾರಿ ಎನಿಸಿ ಜಿಲ್ಲೆಯ ಹೆಮ್ಮೆಯಾಗಿದ್ದಾರೆ. ಇಂಥ ಸಾಂಸ್ಕøತಿಕ ಸಿರಿ ಸಂಪದದಿಂದ ಈ ಜಿಲ್ಲೆ ವಿಶೇಷವೆನಿಸಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net