ಸಚಿವ ರಮೇಶ್​ ಜಾರಕಿಹೊಳಿ ಬಾಲ್ಯ ಸ್ನೇಹಿತ ಕೊತ್ವಾಲ್ ನಿಧನ

Kotwal
Published on

ಬೆಳಗಾವಿ: ಸಚಿವ ರಮೇಶ್​ ಜಾರಕಿಹೊಳಿ ಬಾಲ್ಯ ಸ್ನೇಹಿತ ಎಸ್. ಎ. ಕೊತ್ವಾಲ್ ನಿಧನರಾಗಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕೊತ್ವಾಲ್ ಹಲವು ದಿನಗಳಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಗೋಕಾಕ್​ನಲ್ಲಿ ಕೊತ್ವಾಲ್ ಗೌಡರು ಎಂದೇ ಖ್ಯಾತಿ ಹೊಂದಿದ್ದರು. ಬಾಲ್ಯದಿಂದಲೂ ಕೊತ್ವಾಲ್ ಹಾಗೂ ರಮೇಶ್ ಜಾರಕಿಹೊಳಿ ಒಡನಾಡಿಗಳಾಗಿದ್ದರು. ರಮೇಶ್ ಜಾರಕಿಹೊಳಿ ಉತ್ತುಂಗಕ್ಕೇರಲು ಶ್ರಮಿಸಿದ್ದರು.

ಸತತ 6 ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆ ಆಗಿದ್ದ ಕೊತ್ವಾಲ್ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರಾಗಿದ್ದರು. ಇದೀಗ ಸ್ನೇಹಿತನ ಅಕಾಲಿಕ ನಿಧನದಿಂದ ರಮೇಶ್​ ಜಾರಕಿಹೊಳಿ ಕಂಗಾಲಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net