

ತುಮಕೂರು: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ನಾನು ಹಾಗೂ ಡಾ.ಜಿ.ಪರಮೇಶ್ವರ್ ಇಬ್ಬರೂ ವಿರೋಧ ಇದ್ದೇವೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಕ್ಸ್ಪ್ರೆಸ್ ಕೆನಾಲ್ ವಿರುದ್ಧ ಎಲ್ಲಿ ಗಟ್ಟಿ ಧ್ವನಿಯಲ್ಲಿ ಮಾತಾಡಬೇಕೋ ಅಲ್ಲಿ ಇಬ್ಬರೂ ಮಾತನಾಡಿದ್ದೇವೆ. ನಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದೇವೆ. ಏನೇ ಕಾಮಗಾರಿಯಾದರೂ ನೀರು ಹರಿಯಲು ನಾವು ಬಿಡುವುದಿಲ್ಲ. ಪೈಪ್ ಲೈನ್ ಹಾಕಿದರೆ ಅದಕ್ಕೆ ನೀರು ಬಿಡಬೇಕಾಗಿರುವುದು ಈ ಭಾಗದಲ್ಲೇ. ಅದು ಅವರಿಗೆ ಗೊತ್ತಿರಲಿ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ಗೆ ಟಾಂಗ್ ಕೊಟ್ಟರು.