ಗದೆ ಪ್ರದರ್ಶನ ಮಾಡದ ಸಚಿವ ಆರ್.ಬಿ. ತಿಮ್ಮಾಪೂರ

Minister R.B. who did not perform the mace. Thimmapur
Published on

ಮುಧೋಳ: ರನ್ನ ನಗರಿ ಬೆಳಗಲಿಯ ಲಕ್ಷ್ಮೀದೇವಿ ದೇವಾಲಯದ ಹತ್ತಿರ ಬೆಳಗಲಿ ಹಾಗೂ ಮುಧೋಳದಲ್ಲಿ ಮೂರು ದಿನ ಆಯೋಜಿಸಿರುವ ಆರನೇ ರನ್ನ ವೈಭವ-2025ಕ್ಕೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ರನ್ನನ ಗದೆ ಪ್ರದರ್ಶನ ಮಾಡುವ ಮೂಲಕ ಶನಿವಾರ ಅಧಿಕೃತವಾಗಿ ಚಾಲನೆ ನೀಡಿದರು.

ಮುಧೋಳ, ಬಾಗಲಕೋಟೆ ಹಾಗೂ ವಿವಿಧ ಜಿಲ್ಲೆಯ ಕಲಾತಂಡಗಳು ಸೇರಿ ನಾನಾ ಗಣ್ಯರು, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ್ ಸೇವಾದಳದ ಮಕ್ಕಳು ಮೆರವಣಿಗೆಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ಕುದುರೆ ಸಾರೋಟ, ಛತ್ರಿ ಚಾಮರ, ಕೀರ್ತಿಧ್ವಜ, ಕೊಂಬು, ಕಹಳೆ, ಜಾಗಟೆ, ಪೂರ್ಣಕುಂಭ, ಕೆಎಸ್‌ಆರ್‌ಟಿಸಿಯ ರನ್ನನ ಸ್ತಬ್ಧಚಿತ್ರ, ಹಲಗೆ ವಾದ್ಯ, ಡೊಳ್ಳು ಕುಣಿತ, ಕರಡಿ ಮಜಲು, ತಾಸೆ ವಾದನ, ಜಾನಪದ ಕೋಲಾಟ, ಶಹನಾಯಿ ವಾದನ, ಕಣಿವಾದಮ, ಸಂಬಾಳ ವಾದನ, ಝಾಂಜ್ ಪಥಕ, ಕೋಲಾಟ ವಾದ್ಯ, ಕಲಾಟ ವಾದ್ಯ, ಸತ್ತಿಗೆ ಕುಣಿಗೆ, ವೀರಗಾಸೆ, ಪೂಜಾ ಕುಟಿತ ಕೊಂಬುಕಹಳೆ, ನಾದಸ್ವರ, ಸ್ತಬ್ಧಚಿತ್ರ, ವೀರಗಾಸೆ, ತಮಟೆ, ಕಂಸಾಳೆ, ಜಗ್ಗಲಿಗೆ ಮೇಳ, ಪೂರ್ಣಕುಂಭ, ನಗಾರಿ, ಛತ್ರಿ ಚಾಮರ, ದೇವಿ ವೇಷಧಾರಿ, ಕೀಲು ಕುದುರೆ, ನೃತ್ಯ, ಮರಗಾಲು, ಮುಳ್ಳು ಕುಣಿತ, ಡೊಳ್ಳು ಕುಣಿತ, ಪೂಜಾಕುಣಿತ, ಡೊಳ್ಳು ಕುಣಿತ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಭಾರತ್ ಸೇವಾದಳ ತಂಡ ಮೆರವಣಿಗೆಯಲ್ಲಿ 40 ಕಲಾ ತಂಡಗಳು ಸುಮಾರು 500ಕ್ಕೂ ಅಧಿಕ ಕಲಾವಿದರು ಪಾಲ್ಗೊಂಡಿದ್ದರು.

ಬಂದಲಕ್ಷ್ಮೀ ದೇವಾಲಯ ರನ್ನ ವೃತ್ತ ಮಾರ್ಗವಾಗಿ 1 ಕಿಮೀ ಮೆರವಣಿಗೆ ಕ್ರಮಿಸಿತು. ಉತ್ಸವದ ಪ್ರಧಾನ ವೇದಿಕೆವರೆಗೂ ರಸ್ತೆ ಬದಿ ನಿಂತಿದ್ದ ಜನ ಸೆಲ್ಪಿ ಕ್ಲಿಕ್ಕಿಸಿಕೊಂಡರು. ಮಾರ್ಗದುದ್ದಕ್ಕೂ ವಿದ್ಯಾರ್ಥಿಗಳು, ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನಾಡಧ್ವಜ ಹಿಡಿದು ಮೆರವಣಿಗೆ ಸ್ವಾಗತಿಸಿದರು.

ಕನ್ನಡ ಕನ್ನಡ ಸಾಗಿ ನಮ್ಮ ಸಂಗಡ, ನಾನು ಕನ್ನಡಿಗ ಕನ್ನಡವೇ ನನ್ನ ನುಡಿ, ಕನ್ನಡವೆನ್ನಿ ಜತೆಗೆ ಬನ್ನಿ ಎಂಬ ಘೋಷಣೆಗಳ ಸಾಮೂಹಿಕ ಧ್ವನಿಯ ಕರತಾಡನ ಮೊಳಗಿತು.

ಜಾನಪದ ಮೇಳಗಳ ವಾದ್ಯಕ್ಕೆ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಹೆಜ್ಜೆ ಹಾಕಿ ನಾಡು-ನುಡಿ ಬಗೆಗಿನ ಪ್ರೀತಿ ಪ್ರದರ್ಶಿಸಿದರು. ರಸ್ತೆ ಬದಿಯ ಕಟೌಟ್‌ಗಳು ಕನ್ನಡದ ಹಿರಿಮೆ ಗರಿಮೆ ಸಾರುತ್ತಿದ್ದವು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿದರ ಕುರೇರ, ಎಸಿ ಶ್ವೇತಾ ಬೀಡಿಕರ, ತಹಸೀಲ್ದಾರ್ ಮಹದೇವ ಸನಮುರಿ, ಬೀಳಗಿ ತಹಸೀಲ್ದಾರ್ ವಿನೋದ ಹತ್ತಳ್ಳಿ, ಗಿರೀಶ ಸ್ವಾದಿ, ರೂಪಾ ಸದಾಶಿವ ಹೊಸಟ್ಟಿ, ಮುಖ್ಯಾಧಿಕಾರಿ ನಾಮದೇವ ಲಮಾಣಿ ಇದ್ದರು.

ಹಾಲಿಗೆ ಅಭಿಷೇಕ: ಬಹುದಿನಗಳ ನಂತರ ನಡೆದ ರನ್ನ ವೈಭವಕ್ಕೆ ಕಾರಣಕರ್ತ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಭಾವಚಿತ್ರಕ್ಕೆ ಹಾಲಿನ ಅಭೀಷೇಕ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net