

ರಾಯಚೂರು: ಜಗತ್ತಿನಲ್ಲಿ ತಾನೇ ದೊಡ್ಡ ನಾಯಕ ಎಂದು ಸಚಿವ ಪ್ರಿಯಾಂಕ ಖರ್ಗೆ ಅಂದುಕೊಂಡಿದ್ದಾರೆ. ಪ್ರಧಾನಿ ಮೋದಿ ಮತ್ತು ಪಕ್ಷದ ಪ್ರಣಾಳಿಕೆ ಬಗ್ಗೆ ಮಾತನಾಡುವ ನೈತಿಕೆ ಅವರಿಗಿಲ್ಲ ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಬಿಜೆಪಿ ಪ್ರಣಾಳಿಕೆಯನ್ನು ಪಿಕ್‌ನಿಕ್ ಅಲ್ಬಮ್ ಎಂದು ಪ್ರಿಯಾಂಕ ಖರ್ಗೆ ಹೇಳಿರುವುದು ಸರಿಯಲ್ಲ. ಶೋಕಿಗೆ ಹೇಳಿಕೆ ನೀಡುವುದು ಅವರ ಜಾಯಮಾನ ಎಂದರು.
ಕಳೆದ 10 ವರ್ಷದಲ್ಲಿ ನಮ್ಮ ಸರ್ಕಾರ ಏಣು ಮಾಡಿದೆ. 60 ವರ್ಷದಲ್ಲಿ ಅವರು ಏನು ಮಾಡಿದ್ದಾರೆ ಎಂದು ತುಲನೆ ಮಾಡಿ ನೋಡಲಿ. ನಾವು 10 ವರ್ಷದಲ್ಲಿ ಎಷ್ಟು ಮನೆ ಕೊಟ್ಟಿದ್ದೇವೆ. ಅವರು ಎಷ್ಟು ಕೊಟ್ಟಿದ್ದಾರೆ ಎನ್ನುವುದನ್ನು ಪರಿಶೀಲನೆ ನಡೆಸಲಿ.
ಗ್ಯಾರಂಟಿ ಯೋಜನೆಗೆ ಅವರ ಮನೆಯಿಂದ ಹಣ ಕೊಡುತ್ತಿದ್ದಾರಾ. ರಾಜ್ಯ ಸರ್ಕಾರ 1.95 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಅದನ್ನು ಜನರೇ ಕಟ್ಟಬೇಕು. ಜನರಿಗೆ ಈಗ ಎಲ್ಲವೂ ಗೊತ್ತಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ತಿಕ್ಕ ಪಾಠ ಕಲಿಸುತ್ತಾರೆ ಎಂದು ಡಾ.ಶಿವರಾಜ ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ಪಕ್ಷದ ಮುಖಂಡರಾದ ಕೆ.ಎಂ.ಪಾಟೀಲ್, ಜಿ.ಶಂಕರರೆಡ್ಡಿ, ರಾಘವೇಂದ್ರ ಉಟ್ಟೂರು ಹಾಗೂ ಮುಖಂಡರು ಉಪಸ್ಥಿತರಿದ್ದರು.