

ರಾಯಚೂರು ಆರ್‌ಎಸ್‌ಎಸ್ ನಿರ್ಭಂದ ಮಾಡಬೇಕೆಂದು ಹೇಳಿಕೆ ಸಚಿವ ಪ್ರಿಯಾಂಕ್ ಖರ್ಗೆ ರನ್ನು ಖಂಡಿಸುತ್ತೇವೆಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಧರ್ಮ ಆಚರಣೆ, ನಂಬಿಕೆಗೆ ಅವಕಾಶವಿದೆ. ಆರ್‌ಎಸ್‌ಎಸ್ ಸ್ವಾತಂತ್ರ್ಯಪೂರ್ವದಿಂದಲೇ ಸ್ವಯಂ ಸೇವೆಯಲ್ಲಿ ತೊಡಗಿರುವ ಇತಿಹಾಸವಿದೆ. ಆದರೆ ಕಾಂಗ್ರೆಸ್ ಸಂಘಟನೆ ಬೆಳವಣಿಗೆ ಸಹಿಸದೇ ಸುಳ್ಳು ಆರೋಪಗಳನ್ನು ಮಾಡುತ್ತಲೇ ಬಂದಿದೆ.
ಪ್ರಿಯಾಂಕ ಖರ್ಗೆಯವರಿಗೆ ಆರ್‌ಎಸ್‌ಎಸ್ ನೂರು ವರ್ಷದ ಸಂಭ್ರಮ ಬೆಳವಣಿಗೆ ಸಹಿಸದೇ ತಡೆಯಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಕಲಬುರಗಿ ಸೇರಿದಂತೆ ಮಳೆಯಿಂದ ಬೆಳೆ ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದರೂ ಸರ್ಕಾರ ಪರಿಹಾರ ನೀಡಿಲ್ಲ. ಸಮಾಜದ ನಿಜವಾದ ಕಳಕಳಿಯಿದ್ದರೆ ಸಿಎಂಗೆ ಖರ್ಗೆ ಪತ್ರ ಬರೆದು ಒತ್ತಾಯಿಸಬೇಕಿತ್ತು. ಎಲ್ಲ ರಾಜಕೀಯ ಪಕ್ಷಗಳು ಚಟುವಟಿಕೆಗಳು ಸರ್ಕಾರಿ ಜಾಗದಲ್ಲಿಯೇ ನಡೆಯುತ್ತವೆ ಸಮಾವೇಶ, ಸಭೆ ನಡೆಸಲಾಗುತ್ತದೆ.
ಸರ್ಕಾರಕ್ಕೆ ಧಮ್ಮು, ತಾಕತ್ತು ಇದ್ದರೆ ಎಲ್ಲವನ್ನು ನಿಷೇಧಿಸಬೇಕು ಎಂದರು. ಈ ಸಂದರ್ಭದಲ್ಲಿ ಎಸ್‌ಸಿ ಮೋರ್ಚಾ ಘಟಕದ ಅಧ್ಯಕ್ಷ ಪಿ.ಯಲ್ಲಪ್ಪ, ತಿಮ್ಮಪ್ಪ ಫಿರಂಗಿ, ಭೀಮಣ್ಣ ಮಂಚಾಲ, ಸಂಗತೋಷ ರಾಜಗುರು, ಮೌನೇಶ, ಮಲ್ಲಿಕಾರ್ಜುನ ಹಳ್ಳೂರು ಇದ್ದರು.