ಸಚಿವ ಸ್ಥಾನದ ಆಕಾಂಕ್ಷಿತರೆಲ್ಲ ನನ್ನ ಗೆಳೆಯಂದಿರು

Ramesh-Web
Published on

ಗೋಕಾಕ: ಉಮೇಶ ಕತ್ತಿ ಸೇರಿದಂತೆ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವವರು ಎಲ್ಲರೂ ನನ್ನ ಗೆಳೆಯರೇ ಆಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ನಗರದ ಹೊರ ವಲಯದ ನಾಕಾ ನಂ-1ರ ಅಡಿಬಟ್ಟಿ ಬಡಾವಣೆಯಲ್ಲಿ ನಗರಸಭೆ ಗೃಹಭಾಗ್ಯ ಯೋಜನೆಯಡಿ 1.3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಪೌರ ಕಾರ್ಮಿಕರ ವಸತಿ ಸಮುಚ್ಚಯ ವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಿ.ಪಿ. ಯೋಗೇಶ್ವರ, ಆರ್.ಶಂಕರ, ಎಂಟಿಬಿ ನಾಗರಾಜ, ಎಚ್.ವಿಶ್ವನಾಥ ಕೂಡ ನನ್ನ ಗೆಳೆಯರು. ಇವರಲ್ಲಿ ಯಾರಿಗೆ ಸಚಿವ ಸ್ಥಾನ ಕೊಡಬೇಕು ಎಂಬುದನ್ನು ಸಿಎಂ ಯಡಿಯೂರಪ್ಪ ನಿರ್ಧರಿಸುತ್ತಾರೆ.

ಎಲ್ಲರಿಗೂ ಮಂತ್ರಿಸ್ಥಾನ ಸಿಕ್ಕರೆ ಸಂತೋಪ ಎಂದು ಹೇಳಿದರು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಡ್ನವೀಸ್ ಅವರನ್ನು ಭೇಟಿ ಮಾಡಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ. ನಾನು ಮಂತ್ರಿಯಾದಾಗಿನಿಂದ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ನಾನು ಮಂತ್ರಿಯಾಗಲು ಮತ್ತು
ರಾಜ್ಯದಲ್ಲಿ ಸರ್ಕಾರ ರಚನೆಯಾಗಲು ಡ್ನವೀಸ್ ಅವರ ಪಾತ್ರವೂ ಬಹುಮುಖ್ಯವಾಗಿದೆ. ಹೀಗಾಗಿ ದೆಹಲಿಯಿಂದ ಹಿಂದಿರುಗುವ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದೆ ಅಷ್ಟೇ ಎಂದು ಉಸ್ತುವಾರಿ ಸಚಿವ ರಮೇಶ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net