ಸಿಂಗ್​ ನಿಧನಕ್ಕೆ ಸಚಿವ ಪಾಟೀಲ ಕಂಬನಿ

Minister Patil Kambani for Singh's death
ಸಚಿವ ಶಿವನಂದ ಪಾಟೀಲ
Published on

ಬಸವನಬಾಗೇವಾಡಿ: ಮಾಜಿ ಪ್ರಧಾನಿ ಡಾ.ಮನಮೋಹನ್​ ಸಿಂಗ್​ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಕಂಬನಿ ಮಿಡಿದಿದ್ದಾರೆ.

ವಿತ್ತ ಸಚಿವರಾಗಿ, ಪ್ರಧಾನಮಂತ್ರಿಯಾಗಿ ಡಾ.ಮನಮೋಹನ್​ ಸಿಂಗ್​ ದೇಶಕ್ಕೆ ನೀಡಿರುವ ಕೊಡುಗೆ ಗಮನಾರ್ಹ. ಭಾರತ ಇಂದು ಆರ್ಥಿಕವಾಗಿ ಉನ್ನತ ಸ್ಥಿತಿಯಲ್ಲಿರಲು ಅವರೇ ಕಾರಣರು. ಉದ್ಯೋಗ ಖಾತ್ರಿ ಯೋಜನೆ ಮೂಲಕ ದುಡಿಯುವ ಕೈಗಳಿಗೆ ಕೆಲಸ ಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಬ್ಯಾಂಕಿಂಗ್​ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ತೆರಿಗೆ ವ್ಯವಸ್ಥೆ ಸರಳೀಕರಣ, ಕಾನೂನು ಸಡಿಲಿಕೆ ಮೂಲಕ ಉದ್ಯಮಸ್ನೇಹಿ ವಾತಾವರಣ ನಿರ್ಮಿಸಿದರು. ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣ ನೀತಿಗಳ ಮೂಲಕ ಗಣನೀಯ ಬದಲಾವಣೆಗೆ ಶ್ರಮಿಸಿದ್ದರು ಎಂದು ಶೋಕ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net