

ರಾಯಚೂರು ನಗರದ ಎಚ್‌ಎಸ್‌ಆರ್ ಬಡಾವಣೆಯಲ್ಲಿ ಜಿಲ್ಲಾಡಳಿತ, ನಗರಸಭೆ ವತಿಯಿಂದ ಆಯೋಜಿಸಿದ್ದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿಯಲ್ಲಿ ಭಾನುವಾರ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಭಾಗವಹಿಸಿ ಶ್ರೀನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪರ‍್ಚನೆ ಮಾಡಿದರು.
ನಂತರ ಮಾತನಾಡಿ, ಮೌಡ್ಯತೆ ಹಾಗೂ ಜಾತಿ ರ‍್ಮದ ತಾರತಮ್ಯ ತೊಲಗಿಸಲು ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದರು ಎಂದು ನಾರಾಯಣ ಗುರುಜಿ ಅವರನ್ನು ಸ್ಮರಿಸಿದದರು.
ಮಾನವ ಕುಲದಲ್ಲಿ ಒಂದೆ ಜಾತಿ, ಒಂದೆ ಮತ, ಒಂದೆ ದೇವರು ಎಂಬ ಸಂದೇಶದೊಂದಿಗೆ ಮೌಡ್ಯತೆ ಹಾಗೂ ಜಾತಿ ರ‍್ಮದ ತಾರತಮ್ಯ ಜಾತಿ ದ್ವೇಷದ ಗೋಡೆಯನ್ನು ಒಡೆದು ಎಲ್ಲರಲ್ಲಿ ಭಾತೃತ್ವ ಮತ್ತು ಸಮಾನತೆಯ ಪರಿಕಲ್ಪನೆಯನ್ನು ಬಿತ್ತಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಮತ್ತು ಹೋರಾಟ ಆರ‍್ಶಪರ‍್ಣವಾದದ್ದು. ಎಲ್ಲರಲ್ಲೂ ಮಾನವೀಯತೆಯ ಸದಾಶಯವನ್ನು ಬೆಳೆಸುವಲ್ಲಿ ಗುರುವಿನ ಪಾತ್ರ ಮಹತ್ವದ್ದು.
ಈ ಸಂರ‍್ಭದಲ್ಲಿ ನಗರ ಶಾಸಕ ಶಿವರಾಜ ಪಾಟೀಲ್, ಗ್ರಾಮೀಣ ಶಾಸಕ ದದ್ದಲ್ ಬಸನಗೌಡ, ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಮುಖಂಡರಾದ ಜಯವಂತರಾವ್ ಪತಂಗೆ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಶಿವಮರ‍್ತಿ ಜಿ, ನರಸನಗೌಡ, ತಾಯನಗೌಡ, ಬಸವರಾಜ ಪಾಟೀಲ್ ಅತ್ತನೂರು ಸೇರಿ ಅನೇಕರಿದ್ದರು.