ಮುಜುಗರ ತಪ್ಪಿಸಿಕೊಳ್ಳಲು ಮಾಧ್ಯಮ ಹೊರಗಿಟ್ಟು ಚರ್ಚಿಸಿದ ಸಚಿವ ಪರಮೇಶ್ವರ

IMG-20240807-WA0004
Published on

ಕೊಪ್ಪಳ: ಅನುಮಾನಾಸ್ಪದವಾಗಿ ಮೃತಪಟ್ಟ ಯಾದಗಿರಿ ಪಿಎಸ್ಐ ಪರಶುರಾಮ ಕುಟುಂಬಕ್ಕೆ ಸಾಂತ್ವಾನ ಹೇಳಲು ಬಂದ ಗೃಹ ಸಚಿವ ಜಿ.ಪರಮೇಶ್ವರ ಮಾಧ್ಯಮದವರನ್ನು ಹೊರಗಿಟ್ಟು ಕದ ಹಾಕಿಕೊಂಡು ಚರ್ಚಿಸಿದರು.

ಪರಶುರಾಮ ಸಾವು ಹಲವು ಅನುಮಾನ ಹುಟ್ಟು ಹಾಕಿದೆ. ಅಲ್ಲದೇ ಪ್ರಕರಣ ದಾಖಲಿಸಲು ಪೊಲೀಸರು 16 ಗಂಟೆ ತಡ ಮಾಡಿದ್ದಾರೆ. ಸರ್ಕಾರ ನಡೆದುಕೊಂಡ ರೀತಿಗೆ ಪರಶುರಾಮ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರು ನ್ಯಾಯ ಕೊಡಿಸಿದ ನಂತರವೇ ಗೃಹ ಸಚಿವರು ಕುಟುಂಬ ಭೇಟಿ ಮಾಡಬೇಕು ಎಂದು ಒತ್ತಾಯಿಸಿದ್ದರು.

ಅಲ್ಲದೇ ಪರಮೇಶ್ವರ್ ಗೆ ಘೇರಾವ್ ಹಾಕಲು ಗ್ರಾಮದ ಯುವಕರು ಸಿದ್ಧರಾಗಿದ್ದರು. ಹೀಗಾಗಿ ಗೃಹ ಸಚಿವರು ಕೊಪ್ಪಳ ಜಿಲ್ಲೆ ಪ್ರವೇಶಿಸುತ್ತಲೇ ಕಾರಟಗಿ ತಾಲೂಕಿನ ಸೋಮನಾಳ ವರೆಗೆ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ದಾರಿಯಲ್ಲಿ ಎಲ್ಲೂ ಯಾಬುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಲಾಗಿದೆ.
ಸೋಮನಾಳ ಗ್ರಾಮಕ್ಕೆ ಆಗಮಿಸಿದ ಸಚಿವ ಪರಮೇಶ್ವರವ ಮನೆಯೊಳಗೆ ಕುಟುಂಬದವರನ್ನು ಭೇಟಿ ಮಾಡಿದರು.

ಸಚಿವರು ಒಳ ಹೋಗುತ್ತಲೇ ಮಾಧ್ಯಮದವರನ್ನು ಹೊರಗಿಡಲಾಯಿತು. ಯಾರಾದರೂ ಸರ್ಕಾರದ ವಿರುದ್ಧ ಪ್ರಶ್ನಿಸಿದರೆ ಮುಜುಗರಕ್ಕೀಡಾಗಬೇಕಾಗುತ್ತದೆಂದು ಅಂತರ ಕಾಯ್ದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net