ಜಿಲ್ಲೆಯ ಹಿತಕಾಯಲು ಬದ್ಧ ಪರಂ ಘೋಷಣೆ

02Tmk_Param_PC_01
Published on

ತುಮಕೂರು: ಜಿಲ್ಲೆಯ ಹಿತಕಾಯಲು ಯಾವುದೇ ತ್ಯಾಗಕ್ಕು ಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಎಕ್ಸ್‌ಪ್ರೆಸ್‌ ಕೆನಾಲ್ ಲಿಂಕ್ ಯೋಜನೆ ಸರ್ಕಾರದ ತೀರ್ಮಾನ. ಕುಣಿಗಲ್ ಗೆ ಮಾತ್ರ ನೀರು ಹರಿಸಲಾಗುವುದು. ಯಾರು ಆತಂಕಕ್ಕೊಳಗಾಗುವುದು ಬೇಡ. ಮಾಗಡಿ, ರಾಮನಗರಕ್ಕೆ ಸದ್ಯ ನೀರು ತಗೊಂಡು ಹೋಗುವುದಿಲ್ಲ ಎಂದು ನಗರದ ಹೇಮಾವತಿ ನಾಲಾ ವಲಯ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಈ ಯೋಜನೆಯಿಂದ ಎಲ್ಲರಿಗೂ ನಮ್ಮ ಪಾಲಿನ ನೀರಿಗೆ ತೊಂದರೆ ಆಗಲಿದೆ ಎಂಬುದು ನಿಜಕ್ಕು ಆತಂಕ ಇರುವುದು ಸಹಜ. ನಮ್ಮದು ರೈತ ವಿರೋಧಿ ಸರ್ಕಾರವಲ್ಲ. ಸಿಎಂ, ಡಿಸಿಎಂಗೆ ರೈತರ ಕಾಳಜಿ ಇದೆ. 2013 ರಿಂದಲೇ ಪ್ರತಿವರ್ಷ ನೀರಾವರಿಗೆ 10 ಸಾವಿರ ಕೋಟಿ ಘೋಷಣೆ ಮಾಡಿದ್ವಿ. ಅದೇ ಪ್ರಕಾರ 68 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ರೈತ ಸಮುದಾಯಕ್ಕೆ ಅನುದಾನವನ್ನು ಬಳಸಿದ್ದೇವೆ. ನೀರಾವರಿಗೆ ಆದ್ಯತೆ ಕೊಡುತ್ತಾ ಬಂದಿದ್ದೇವೆ. ಈ ಯೋಜನೆಯಿಂದ ಯಾವುದೇ ರೀತಿಯ ತೊಂದರೆ ಆಗದಂತೆ ಅನುಷ್ಠಾನ ಮಾಡುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net