ಕೋಟೆ ಪ್ರದೇಶಕ್ಕೆ ಸಚಿವ ಎನ್‌ಎಸ್‌ಬಿ ಭೇಟಿ

RAICHUR
RAICHUR
Published on

ರಾಯಚೂರು ನಗರದ ಐತಿಹಾಸಿಕ ಕೋಟೆ ಪ್ರದೇಶಕ್ಕೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಸೋಮವಾರ ಭೇಟಿ ನೀಡಿ, ಕಂದಕ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.

ಈಗಾಗಲೇ ಹಲವಾರು ದಿನಗಳಿಂದ ಜೆಸಿಬಿಗಳ ಮೂಲಕ ಕಂದಕದ ಶುಚಿತ್ವ ಕಾರ್ಯ ನಡೆಯುತ್ತಿದೆ. ಇದಕ್ಕೆ ನಗರದ ನಿವಾಸಿಗಳು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈಜ್ಞಾನಿಕವಾಗಿ ಪೂರ್ಣ ಪ್ರಮಾಣದಲ್ಲಿ ಸರಿಪಡಿಸಬೇಕು. ಶಾಶ್ವತವಾಗಿ ಈ ಪ್ರದೇಶ ಸುಂದರವಾಗಿ ಕಾಣುವಂತಾಗಬೇಕು. ಕೋಟೆ ಕಂದಕದ ಕಾಮಗಾರಿಯು ಅಚ್ಚುಕಟ್ಟಾಗಿ ನಡೆದು ಇದು ಜನಾಕರ್ಷಣೀಯವಾಗಿ ಕಾಣಲು ಕೋಟೆ ಪ್ರದೇಶದಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಿಸಬೇಕು. ಹಾಳಾಗಿರುವ ಗ್ರಿಲ್‌ಗಳನ್ನು ಸರಿಪಡಿಸಿ ಪುನರೋತ್ಥಾನಕ್ಕೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಸೂಪರ್ ಬಜಾರ್ ಹತ್ತಿರದ ಕಾಟಾ ದರ್ವಾಜ್ ಮತ್ತು ತೀನ್ ಕಂದಿಲ್ ವೃತ್ತಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ.,ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ, ಪಾಲಿಕೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಶ್ರೀಕೃಷ್ಣ ಶಾವಂತಗೇರಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮಹೇಶ, ರಾಘವೇಂದ್ರ, ಮೇನಕಾ ಪಟೇಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net