ಪಿಆರ್‌ಇಡಿ ಇಲಾಖೆ ಅಧಿಕಾರಿಗಳ ವಿರುದ್ಧ ಸಚಿವರ ಆಕ್ರೋಶ

minister meet
Published on

ಮಡಿಕೇರಿ:

ಕೊಡಗಿನಲ್ಲಿ ಪಂಚಾಯತ್ ರಾಜ್ ಎಂಜಿನಿಯರಿAಗ್ ಇಲಾಖೆಗೆ ಸೇರಿದ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷö್ಯ ಎದ್ದು ಕಾಣುತ್ತಿದ್ದು, ಅವರ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮತ್ತು ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಸೂಚಿಸಿದರು. ಕೊಡಗಿನಲ್ಲಿ ಮಳೆಹಾನಿ ಸಂಬAಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಳೆದ ತಿಂಗಳು ನಡೆದ ಕೆಡಿಪಿ ಸಭೆ ನಂತರದ ಬೆಳವಣಿಗೆಗಳನ್ನು ಪರಮಾರ್ಶಿಸಲು ಶುಕ್ರವಾರ ಕರೆದಿದ್ದ ಸಭೆಯಲ್ಲಿ ಮಾತನಾಡಿದರು.

ಸಭೆಯ ಆರಂಭದಲ್ಲೇ ಪಿಆರ್‌ಇಡಿ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಬೋಸರಾಜು, ಕಳೆದ ವರ್ಷದ ಮಳೆಹಾನಿ ಕಾಮಗಾರಿಗಳನ್ನೇ ಇನ್ನೂ ನಡೆಸಿಲ್ಲ. ಸಿಬ್ಬಂದಿ ಇಲ್ಲ, ಗುತ್ತಿಗೆದಾರರು ಸಿಗುತ್ತಿಲ್ಲ ಎಂದು ಸಬೂಬು ಹೇಳುತ್ತಾ ದಿನ ದೂಡುತ್ತಿದ್ದಾರೆ. ಪಿಆರ್‌ಇಡಿ ಹಿರಿಯ ಅಧಿಕಾರಿಗಳು ಕೊಡಗಿಗೆ ಬರುವುದೇ ಇಲ್ಲ. ಹೀಗಾದರೆ ಇಲ್ಲಿಯ ಸಮಸ್ಯೆ ಅವರಿಗೆ ಗೊತ್ತಾಗುವುದು ಹೇಗೆ? ಪ್ರತಿ ಸಲವೂ ಒಂದೇ ಉತ್ತರ ಅಧಿಕಾರಿಗಳಿಂದ ಬರುತ್ತಿದೆ. ಆದರೆ ಕೆಲಸ ಮಾತ್ರ ಆಗುವುದಿಲ್ಲ. ಸರ್ಕಾರ ಹಣ ಕೊಡಲು ತಯಾರಿದೆ. ಆದರೆ ಅಧಿಕಾರಿಗಳಿಗೆ ಕೆಲಸ ಮಾಡುವ ಉತ್ಸಾಹ ಇಲ್ಲ. ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ಕೊಟ್ಟರೂ ಟೆಂಡರ್ ಪ್ರಕ್ರಿಯೆ ನಡೆಸಿಲ್ಲ. ಮಕ್ಕಳಿಗೋಸ್ಕರ ಸರ್ಕಾರ ಹಣ ಕೊಟ್ಟರೂ ಉಪಯೋಗಿಸದಿರುವುದಕ್ಕೆ ನಾಚಿಕೆ ಆಗುವುದಿಲ್ಲವೆ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಾಲೆ ಕಟ್ಟಡಗಳ ದುಸ್ಥಿತಿ ವರದಿ ಕೊಡದ ಬಗ್ಗೆ ಪಿಆರ್‌ಇಡಿ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೋಸರಾಜು ಇಂಥವರ ಮೇಲೆ ಕ್ರಮ ತೆಗೆದುಕೊಳ್ಳದಿದ್ದರೆ ಆಡಳಿತ ವ್ಯವಸ್ಥೆ ಕುಸಿದಿದೆ ಎಂದೇ ಅರ್ಥ. ಕೂಡಲೇ ಇವರ ವಿರುದ್ಧ ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿ ಎಂದು ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಒ ಅವರಿಗೆ ಸೂಚಿಸಿದರು. ಪಿಆರ್‌ಇಡಿ ಅಧೀಕ್ಷಕ ಅಭಿಯಂತರರಿಗೆ ಕರೆ ಮಾಡಿ ಕೊಡಗಿನಲ್ಲಿ ಇಲಾಖೆಯ ನಿರ್ಲಕ್ಷö್ಯತನದ ಬಗ್ಗೆ ಕಿಡಿಕಾರಿದರು. ಪಿಆರ್‌ಇಡಿ ಇಲಾಖೆಯಿಂದ ಏನು ಕೆಲಸ ಆಗಿದೆ ? ಯಾವ ಕೆಲಸ ಬಾಕಿ ಇದೆ ಎನ್ನುವುದರ ಬಗ್ಗೆ ಒಂದು ವಾರದೊಳಗೆ ಮಾಹಿತಿ ನೀಡುವಂತೆ ಆದೇಶಿಸಿದರು. ಶಾಸಕರಾದ ಎ.ಎಸ್. ಪೊನ್ನಣ್ಣ ಮತ್ತು ಡಾ. ಮಂತರ್ ಗೌಡ ಕೂಡ ಪಿಆರ್‌ಇಡಿ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ವರ್ಷದ ಮಳೆಹಾನಿ ಕಾಮಗಾರಿ ಇನ್ನೂ ಪೂರ್ತಿಮಾಡಿಲ್ಲ ಎಂದು ಪಿಆರ್‌ಇಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪೊನ್ನಣ್ಣ, ಈಗ ಆಗಿರುವ ಕೆಲಸ, ಆಗಬೇಕಿರುವ ಕೆಲಸ ಪಟ್ಟಿ ಮಾಡಿ ಕೊಡಿ ಎಂದು ತಾಕೀತು ಮಾಡಿದರು. ಡಾ. ಮಂತರ್ ಗೌಡ ಮಾತನಾಡಿ ಪಿಆರ್‌ಇಡಿ ಅಧಿಕಾರಿಗಳು ಇಲಾಖೆಗೆ ತೊಂದರೆ ಕೊಡುವುದಕ್ಕೆ ಬಂದAತಿದೆ. ಜಿ.ಪಂ. ಸಿಇಒ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ, ಡಿಸಿಎಫ್ ಅಭಿಷೇಕ್ ವೇದಿಕೆಯಲ್ಲಿದ್ದರು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net