

ಭಟ್ಕಳ: ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಮತ್ತು ಕುಟುಂಬದವರು ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.
ಪ್ರಯಾಗರಾಜ್ನ ವಾಸ್ತವ್ಯದಲ್ಲಿದ್ದ ನಾಮಧಾರಿ ಸಮಾಜದ ಕುಲಗುರು, ಜುನಾ ಆಖಾಡದ ಮಹಾಮಂಡಲೇಶ್ವರ, ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರು ಸಚಿವ ಮಂಕಾಳ ವೈದ್ಯರಿಗೆ ಮಾರ್ಗದರ್ಶನ ನೀಡಿ, ಆಶೀರ್ವದಿಸಿದರು.
ಇದಕ್ಕೂ ಮುನ್ನ ಸಚಿವರು ಅಯೋಧ್ಯೆಗೆ ಭೇಟಿ ನೀಡಿ, ಗಡಿ ಹನುಮಾನ್ ದೇವರ ಹಾಗೂ ಪ್ರಭು ಶ್ರೀರಾಮ ಲಲ್ಲಾನ ದರ್ಶನ, ಪ್ರಯಾಗ್ರಾಜ್ನಲ್ಲಿ ಪುಣ್ಯ ಸ್ನಾನದ ಬಳಿಕ ಶ್ರೀ ಕಾಶಿ ವಿಶ್ವನಾಥ ದೇವರ ದರ್ಶನ ಮಾಡಿದ್ದು ನಮ್ಮ ಪುಣ್ಯ ಎಂದು ಮಂಕಾಳ ವೈದ್ಯ ಹೇಳಿದರು. ಪತ್ನಿ ಪುಷ್ಪಲತಾ, ಮಗಳು ಬೀನಾ ಅವರ ಜತೆಗಿದ್ದರು.