ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಕೊಟ್ರೆ ಅವರಿಗೆ ಮೊದಲು ಅಭಿನಂದನೆ ಹೇಳುವವ ನಾನು!!

mankal vaidya
Published on


ಕಾರವಾರ: ಸಿದ್ದರಾಮಯ್ಯ ಅವರು ದೇಶಪಾಂಡೆ ಅವರು ಅನ್ಯೂನ್ಯವಾಗಿದ್ದವರು. ಸಿದ್ದರಾಮಯ್ಯ ಅವರೇ ದೇಶಪಾಂಡೆ ಅವರಿಗೆ ನೀವೇ ಸಿಎಂ ಆಗಿ ಎಂದು ಹೇಳಿರಬೇಕು. ಇಲ್ಲದಿದ್ದಲ್ಲಿ ಅವರು ಹಾಗೆ ಮಾತನಾಡಲು ಸಾಧ್ಯವಿಲ್ಲ ಎಂದು ಮಂಕಾಳ ವೈದ್ಯ ಹೇಳಿದರು.
ತಾವು ಸಿಎಂ ಹುದ್ದೆಯ ಆಕಾಂಕ್ಷಿ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್‌.ವಿ.ದೇಶಪಾಂಡೆ ಅವರ ಹೇಳಿಕೆ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸಿದರು.

ದೆಹಲಿ ಹೈಕಮಾಂಡ್‌ನಿಂದ ಹಿಡಿದು ಸಾಮಾನ್ಯ ಕಾರ್ಯಕರ್ತನವರೆಗೂ ಸಿದ್ದರಾಮಯ್ಯನವರೇ ಸಿಎಂ, ಇಂದೂ, ಮುಂದೂ ಎಂದು ನಂಬಿಕೊಂಡಿದ್ದಾರೆ. ಬೇರೆಯವರನ್ನು ಮಾಡುವ ವಿಚಾರ ಮಾಧ್ಯಮಗಳಲ್ಲಿ ಬಿಟ್ಟು ಬೇರೆಲ್ಲೂ ಚರ್ಚೆಗೆ ಬಂದಿಲ್ಲ.
ಹಾಗೇನಾದರೂ ಸಿದ್ದರಾಮಯ್ಯ ಅವರು ಸಿಎಂ ಖುರ್ಚಿ ಬಿಟ್ಟುಕೊಟ್ಟರೆ ಮೊದಲು ಅವರಿಗೆ ಅಭಿನಂದಿಸುವವ ನಾನು. ನಮ್ಮ ದೇಶಪಾಂಡೆ ಅವರು ಸಿಎಂ ಸ್ಥಾನಕ್ಕೆ ಅರ್ಹರಿದ್ದಾರೆ. ಅವರು ಸ್ವತಃ ಸಿಎಂ ಆಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ನಮ್ಮ ಜಿಲ್ಲೆಗೆ ಮುಖ್ಯಮಂತ್ರಿ ಕೊಡುತ್ತಾರೆ ಎಂದರೆ ನನ್ನಷ್ಟು ಸಂತೋಷ ಪಡುವವರು ಯಾರೂ ಇಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net