ಚತುಷ್ಪಥ ಸಮಸ್ಯೆಗ ಕೇಂದ್ರ ಸರ್ಕಾರ ನೇರ ಹೊಣೆ-ಸಚಿವ ಮಂಕಾಳ ವೈದ್ಯ ಆರೋಪ

minister-Mankal-Vaidya
Published on

ಕಾರವಾರ: ಭಟ್ಕಳ-ಕಾರವಾರ ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ವಿಸ್ತರಣೆಯಿಂದಾದ ಅವಾಂತರ, ಅವ್ಯವಸ್ಥೆಗಳಿಗೆ ನೇರವಾಗಿ ಕೇಂದ್ರ ಸರ್ಕಾರವೇ ಹೊಣೆ ಅದನ್ನು ಅವರು ಶೀಘ್ರ ಸರಿ ಪಡಿಸಬೇಕು. ಇಲ್ಲದಿದ್ದಲ್ಲಿ ಬಿಜೆಪಿ ಕೇಂದ್ರ ಸರ್ಕಾರವು ಐಆರ್‌ಬಿ ಕಂಪನಿಗೆ ತನ್ನನ್ನು ಮಾರಿಕೊಂಡಿದೆ ಎಂದು ಅರ್ಥೈಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಎನ್‌ಎಚ್‌ಎಐ ಅಧಿಕಾರಿಗಳ ಜತೆ ಚರ್ಚಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಮಗಾರಿ ಅಸಮರ್ಪಕತೆಯ ಬಗ್ಗೆ ಲೋಕೋಪಯೋಗಿ ಸಚಿವರು ಸ್ವತಃ ಎರಡು ಬಾರಿ ಬಂದು ಸಭೆ ನಡೆಸಿದ್ದಾರೆ. ಖುದ್ದು ಸಿಎಂ ಪರಿಸ್ಥಿತಿ ಅವಲೋಕಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆದರೂ ಯಾವುದೇ ಕ್ರಮವಾಗಿಲ್ಲ.
ರಾಜ್ಯ ಸರ್ಕಾರದಿಂದ ನಾವು ಯೋಜನೆಗೆ ಬೇಕಾದ ಎಲ್ಲ ಸಹಕಾರ ನೀಡಿದ್ದೇವೆ. ಎನ್‌ಎಚ್‌ಎಐ ಹಾಗೂ ರಾಜ್ಯ ಸರ್ಕಾರದ ನಡುವೆ 2014 ರಲ್ಲಿ ಆದ ಒಪ್ಪಂದವನ್ನು ಪಾಲಿಸಲು ಸಿದ್ಧರಿದ್ದೇವೆ. ಆದರೆ, ಗುತ್ತಿಗೆ ಕಂಪನಿ ಐಆರ್‌ಬಿ ಯಾವುದೇ ಕಾರ್ಯ ಮಾಡಲು ಸಿದ್ಧರಿಲ್ಲ.ಇದರಿಂದ ಕಂಪನಿ ಗುತ್ತಿಗೆಯಲ್ಲಿ ಮುಂದುವರಿಯಬೇಕೇ ಬೇಡವೇ ಎಂದು ನಿರ್ಧರಿಸಬೇಕಿದೆ ಎಂದರು.
 ಹೊನ್ನಾವರಕ್ಕೆ ಹೊಸದಾಗಿ ಎನ್‌ಎಚ್‌ಎಐ ಯೋಜನಾ ನಿರ್ದೇಶಕರು ಬಂದಿದ್ದಾರೆ. ಇದರಿಂದ ಒಮ್ಮೆ ಸ್ಥಳ ಪರಿಶೀಲಿಸಿ ಅವರು ವರದಿ ನೀಡಲು ಸೂಚಿಸಿದ್ದೇನೆ ಎಂದರು. ಸೇತುವೆಗಳು ಹಾಳಾಗಿವೆ. ಬಿದ್ದಿವೆ. ಅವುಗಳನ್ನು ಮರು ನಿರ್ಮಾಣ ಮಾಡಿಲ್ಲ ಎಂದರು.
ರೋಡ್ ಕಾಂಗ್ರೆಸ್ ನಿಯಮಾವಳಿಗಳನ್ನು ಐಆರ್‌ಬಿ ಪಾಲಿಸಿಲ್ಲ. ಬೀದಿ ದೀಪಗಳನ್ನು ಅಳವಡಿಸಿಲ್ಲ. ಸೇತುವೆಗಳನ್ನು ನಿರ್ಮಾಣ ಮಾಡಿಲ್ಲ. ಸರ್ವೀಸ್ ರಸ್ತೆ ಇಲ್ಲ. ಎಎನ್‌ಪಿ ಕ್ಯಾಮರಾ ಹಾಕಿಲ್ಲ. ಇದರಿಂದ ವರ್ಷಕ್ಕೆ ನಿಷ್ಠ 100 ಅಪಘಾತಗಳು ಸಂಭವಿಸುತ್ತಿವೆ ಎಂದು ಎಸ್‌ಪಿ ಎಂ.ನಾರಾಯಣ ದೂರಿದರು.

ಸಚಿವರು ನೀಡಿದ ಸೂಚನೆಗಳು

  • *ಈ ತಿಂಗಳ ಅಂತ್ಯದೊಳಗೆ ಜಿಲ್ಲೆಯ ಎಲ್ಲ ರಾಷ್ಟಿçÃಯ, ರಾಜ್ಯ ಹಾಗೂ ಜಿಲ್ಲಾ ಹಾಗೂ ಗ್ರಾಮೀಣ ರಸ್ತೆಗಳ ಹೊಂಡ ಮುಚ್ಚಬೇಕು
  • *ಅರ್ಹತೆ ಇರುವ ಹೊರ ರಾಜ್ಯದ ಪೌರ ಕಾರ್ಮಿಕರನ್ನೂ ಕಾಯಂ ಮಾಡಲು ಕ್ರಮ ಕೈಗೊಳ್ಳಿ
  • *ಸರ್ಕಾರಿ ಮಾನದಂಡದAತೆ ಶ್ರೀಮಂತರು ಪಡೆದ ಬಿಪಿಎಲ್ ಕಾರ್ಡ್ ರದ್ದು ಮಾಡಿ. ಆದರೆ, ತಪ್ಪಿಯೂ ಒಬ್ಬ ಬಡ ಫಲಾನುಭವಿಯ ಕಾರ್ಡ್ ಕಿತ್ತುಕೊಂಡರೆ ಅದಕ್ಕೆ ತಹಸೀಲ್ದಾರ್, ಆರ್‌ಐಗಳನ್ನು ಹೊಣೆಯಾಗಿ ಮಾಡುತ್ತೇವೆ.
  • *ಆರ್‌ಟಿಒ ಕಚೇರಿಗಳಲ್ಲಿ ಏಜೆಂಟರ ಹಾವಳಿ ಬಂದ್ ಆಗಬೇಕು. ಹಾಗೇನಾದರೂ ಆದರೆ, ಖುದ್ದಾಗಿ ಕ್ರಮ ವಹಿಸುತ್ತೇನೆ.
  • *ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ ಶಾಲೆಗಳಿಗೆ ಸ್ವತಂತ್ರ ಅಡುಗೆ ಕೋಣೆ ವ್ಯವಸ್ಥೆ ಮಾಡಿಸಿ, ಇಲ್ಲದೇ ಇದ್ದಲ್ಲಿ ಅವುಗಳನ್ನು ಇನ್ನು 3 ತಿಂಗಳಲ್ಲಿ ಕಟ್ಟಲು ಕ್ರಮ ವಹಿಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net