ಜೆಡಿಎಸ್ ಜತೆ ಒಪ್ಪಂದವೇ ಸೋಲಿಗೆ ಕಾರಣ

Mankal Vaidya
Published on

ಕಾರವಾರ: ಯಡಿಯೂರಪ್ಪನವರನ್ನು ಅವರದ್ದೇ ಪಕ್ಷದವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಈಗ ಅವರ ಮಗನನ್ನು ಬಿಡುತ್ತಾರಾ..? ಎಂದು ಸಚಿವ ಮಂಕಾಳ ವೈದ್ಯ ಪ್ರಶ್ನಿಸಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದನ್ನು ನಾವು ಸ್ವಾಗತಿಸುತ್ತೇವೆ. ನಮಗೆ ವಿರೋಧ ಪಕ್ಷ ಘಟ್ಟಿಯಾಗಿದ್ದರೆ ನಮಗೆ ಖುಷಿ. ನಾವು ಚುರುಕಾಗಿ ಕೆಲಸ ಮಾಡಲು ಆಸಕ್ತಿ ಬರುತ್ತದೆ. ಆದರೆ, ನಾವು ಮಾಡುವ ಕೆಲಸವನ್ನು ಅವರದ್ದೇ ಪಕ್ಷದವರು ಮಾಡುತ್ತಿದ್ದಾರೆ. ವಿಜಯೇಂದ್ರ ಅವರು ಹೆಚ್ಚು ದಿನ ಅಧ್ಯಕ್ಷರಾಗಿರಲು ಅವರದೇ ಪಕ್ಷದವರು ಬಿಡುವುದಿಲ್ಲ ಎಂದರು.
ಮೈತ್ರಿಯಿಂದ ಹಾನಿ:
ಹಿಂದೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು ಗೆಲ್ಲಬಹುದಾಗಿದ್ದ ಇನ್ನೂ ಎರಡು ಸೀಟುಗಳನ್ನು ಕಳೆದುಕೊಂಡೆವು. ಈ ಬಾರಿ ಬಿಜೆಪಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದೆ. ಇದರಿಂದ ಬಿಜೆಪಿ ಸೋಲುತ್ತದೆ ಎಂದು ಮಂಕಾಳ ವೈದ್ಯ ಭವಿಷ್ಯ ನುಡಿದರು.
ನಾವು 28 ಸ್ಥಾನಗಳನ್ನು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಗೆಲ್ಲಲಿದ್ದೇವೆ. ಆದರೆ, ಬಿಜೆಪಿಯವರು ಕನಸಿನಲ್ಲಿದ್ದಾರೆ. ವಿಚಾರ ಮಾಡದೇ ತಾವು 28 ಸೀಟುಗಳನ್ನು ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಈ ಹಿಂದೆ 136 ವಿಧಾನಸಭೆ ಸ್ಥಾನಗಳನ್ನು ನಾವು ಗೆದ್ದಿದ್ದೇವೆ. ಒಂದು ವರ್ಷದಲ್ಲಿ ಪರಿಸ್ಥಿತಿ ಬದಲಾಗದು ಎಂದರು.
........

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net