ಸಿಬ್ಬಂದಿಯಿ೦ದ ಶೂ ಹಾಕಿಸಿಕೊಂಡ ಸಚಿವ ಮಹಾದೇವಪ್ಪ

8 Dwd 4 - Copy
Published on

ಧಾರವಾಡ: ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಬೆಂಗಾವಲು ಸಿಬ್ಬಂದಿಯಿ೦ದ ಶೂ ಹಾಕಿಸಿಕೊಂಡ ಘಟನೆ ನಗರದಲ್ಲಿ ಬುಧವಾರ ನಡೆದಿದೆ. ಜಿಲ್ಲಾ ಪ್ರವಾಸದಲ್ಲಿದ್ದ ಅವರು, ಬೆಳಗ್ಗೆ ಇಲ್ಲಿನ ಗೌರಿಶಂಕರ ಹಾಸ್ಟೆಲ್‌ಗೆ ಭೇಟಿ ನೀಡಿದ್ದರು. ಹಾಸ್ಟೆಲ್‌ನಲ್ಲಿ ಅಡುಗೆ ವ್ಯವಸ್ಥೆ, ವಿದ್ಯಾರ್ಥಿಗಳ ಕೊಠಡಿಗಳು, ಹಾಸ್ಟೆಲ್ ಒಳ- ಹೊರಗಿನ ಸ್ವಚ್ಛತೆಯನ್ನು ಪರಿಶೀಲಿಸಿದರು. ಅಡುಗೆಕೋಣೆಯಿಂದ ಹೊರಬರುತ್ತಿದ್ದಂತೆ ಬೆಂಗಾವಲು ಸಿಬ್ಬಂದಿ ಸಚಿವರಿಗೆ ಶೂ ಹಾಕಿ ಲೇಸ್ ಕಟ್ಟಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net