

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ಬಳಿ ಶುಕ್ರವಾರ ಆಯೋಜಿಸಿದ್ದ ದಸರಾ ಗಜಪಯಣ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಗಜಪಡೆಗೆ ಆರತಿ ಬೆಳಗಲು ನಿರಾಕರಿಸಿದರು.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಅರ್ಚಕ ಪ್ರಹ್ಲಾದ ರಾವ್ ಪೂಜೆ ಸಲ್ಲಿಸಿದರು. ಬಳಿಕ ಗಜಪಡೆಗೆ ಆರತಿ ಬೆಳಗುವಂತೆ ಮಹದೇವಪ್ಪ ಅವರಿಗೆ ಆರತಿ ತಟ್ಟೆ ನೀಡಲು ಮುಂದಾದರು. ಈ ವೇಳೆ ಮಹದೇವಪ್ಪ ಆರತಿ ತಟ್ಟೆ ಪಡೆಯಲು ನಿರಾಕರಿಸಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ನೀಡುವಂತೆ ಸೂಚಿಸಿದರು.
ಪೂಜೆಯ ನಂತರ ಮಹದೇವಪ್ಪ ಎಲ್ಲರ ಜತೆ ಸೇರಿ ಆನೆಗಳಿಗೆ ಪುಷ್ಪಾರ್ಚನೆ ಮಾಡಿದರು.