ಮೈಸೂರು ಸಾಮೂಹಿಕ ಅತ್ಯಾಚಾರ: ಕಠಿಣ ಕಾನೂನು ರಚನೆಗೆ ಶಿಫಾರಸು- ಸಚಿವ ಜೆ.ಸಿ.ಮಾಧುಸ್ವಾಮಿ

madhuwamy
Published on

ಬೆಂಗಳೂರು: ಅತ್ಯಾಚಾರ ಹಾಗೂ ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಕಠಿಣ ಶಿೆಗೆ ಗುರಿಪಡಿಸುವ ಕಾನೂನು ರಚನೆಗೆ ಚಿಂತನೆ ನಡೆದಿದೆ. ಈ ನಿಟ್ಟಿನಲ್ಲಿ ಸಂಸತ್​ಗೆ ರಾಜ್ಯ ಕಾನೂನು ಆಯೋಗದಿಂದ ಶಿಾರಸು ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಮೇಲ್ಮನೆಯಲ್ಲಿ ವಿರೋಧ ಪದ ನಾಯಕ ಎಸ್​.ಆರ್​.ಪಾಟೀಲ ಹಾಗೂ ಬಿಜೆಪಿಯ ಭಾರತಿ ಶೆಟ್ಟಿ ಮಂಡಿಸಿದ್ದ ಚರ್ಚೆಗೆ ಸಂಬಂಧಿಸಿ ಪ್ರತಿಕ್ರಿಯಿಸಿ, ಅತ್ಯಾಚಾರ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್​ ಮಾರ್ಗಸೂಚಿಗಳನ್ವಯ ಮೈಸೂರು ಪೊಲೀಸರು ಕ್ರಮ ಜರುಗಿಸಿದ್ದಾರೆ. ಸಂತ್ರಸ್ತೆಯ ಹೇಳಿಕೆ ದಾಖಲಾತಿಗೆ ಕಾಯದೆ, ವೈಜ್ಞಾನಿಕ ಸಾಾಧಾರಗಳಿಂದ 7 ಮಂದಿ ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಸಂತ್ರಸ್ತೆ ಕುಟುಂಬಸ್ಥರು ಹೇಳಿಕೆ ನೀಡಲು ನಿರಾಕರಿದ್ದಾಗ, ಅವರ ಮನವೊಲಿಸಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲಾಗಿದೆ. ಬೇಗ ಚಾರ್ಜ್​ಶೀಟ್​ ಸಲ್ಲಿಸಲಾಗುವುದು ಎಂದರು.

ತಪ್ಪಿತಸ್ಥರ ಪುರುಷತ್ವ ಹರಣ ಮಾಡುವುದು. ಕೈ ಕತ್ತರಿಸುವುದು ಸೇರಿ ಅಂಗಾಂಗ ತುಂಡರಿಸುವ ಶರಿಯತ್​ ಕಾನೂನು ಜಾರಿಗೆ ತರಲಾಗದು. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸಾಂವಿಧಾನಿಕವಾಗಿ ಬೇರೆ ರೀತಿಯ ಕಠಿಣ ಕಾಯ್ದೆ ತಂದು ಕಾನೂನಿನ ಭಯ ಮೂಡಿಸುವ ಕ್ರಮ ವಹಿಸಲಾಗುವುದು ಎಂದು ಮಾಧುಸ್ವಾಮಿ ಭರವಸೆ ನೀಡಿದರು.

ಆಧುನಿಕ ನಾಗರಕತೆ ಯುಗದಲ್ಲೂ ಮಹಿಳೆ ಮೇಲಿನ ಪೈಶಾಚಿಕ ಕೃತ್ಯ ಸಹಿಸಲಾಗದು. ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ರಸುವ ಪ್ರಶ್ನೆಯೇ ಇಲ್ಲ. ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸುವುದು. ಪೋಕ್ಸೊ ಪ್ರಕರಣದಲ್ಲಿ ಕಡ್ಡಾಯವಾಗಿ ಮಹಿಳಾ ನ್ಯಾಯಾಧೀಶರಿಂದಲೇ ವಿಚಾರಣೆ ಮತ್ತು ವಿಶೇಷ ನ್ಯಾಯಾಲಯಗಳಲ್ಲಿ ಸರ್ಕಾರಿ ವಕೀಲರ ನೇಮಕ ಮಾಡುವಾಗ ಮಹಿಳೆಯರಿಗೆೆ ಹೆಚ್ಚು ಪ್ರಾತಿನಿಧ್ಯ ನೀಡಲು ಆಸಕ್ತವಾಗಿದೆ ಎಂದರು.

ದೇವಸ್ಥಾನ, ಪ್ರವಾಸಿತಾಣದಲ್ಲೂ ಗಸ್ತು

ರಾಜ್ಯದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ನಿಯಂತ್ರಣಕ್ಕಾಗಿ ಎಲ್ಲ ಜಿಲ್ಲೆಗಳಲ್ಲೂ ಮಹಿಳಾ ಪೊಲೀಸ್​ ಠಾಣೆಗಳನ್ನು ತೆರೆಯಲಾಗಿದೆ. ದೇವಸ್ಥಾನ, ಪ್ರವಾಸಿತಾಣ ಹಾಗೂ ಪ್ರೇಮಿಗಳು ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲೂ ಪೊಲೀಸ್​ ಗಸ್ತು ನಡೆಸಲು ಕ್ರಮವಹಿಸಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದರು. ಭಾರತಿ ಶೆಟ್ಟಿ ಮಾತನಾಡಿ, ವಿದೇಶದಲ್ಲಿನ "ಲಿವಿಂಗ್​ ಟುಗೆದರ್​' ಪದ್ದತಿ ಕಾನೂನುಬದ್ಧಗೊಳಿಸಲು ಸರ್ಕಾರಕ್ಕೆ ಸಾಧ್ಯ. ಆದರೆ, ಮಹಿಳಾ ದೌರ್ಜನ್ಯದ ವಿರುದ್ಧ ಕಠಿಣ ಕಾನೂನು ರೂಪಿಸಲು ಏಕೆ ಸಾದ್ಯವಿಲ್ಲ ಎಂಬುದೇ ತಿಳಿಯುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸುಪ್ರೀಂ ಆದೇಶದವರೆಗೆ ಸಂರಕ್ಷಣೆ: ಕರ್ನಾಟಕ ಧಾಮಿರ್ಕ ಕಟ್ಟಡಗಳ ವಿಧೇಯಕ ಅಂಗೀಕಾರ

ಧಾಮಿರ್ಕ ಕಟ್ಟಡ ಸಂರಣೆ ವಿಧೇಯಕದ ಮೂಲಕ ಅಕ್ರಮ ಧಾಮಿರ್ಕ ಕೇಂದ್ರಗಳನ್ನು ಕಾನೂನುಬದ್ಧ ಮಾಡುತ್ತಿಲ್ಲ. ಸುಪ್ರೀಂಕೋರ್ಟ್​ ಆದೇಶ ಬರುವವರೆಗೆ ರಕ್ಷಣೆ ಮಾಡಲಾಗುತ್ತಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು. ಪರಿಷತ್​ನಲ್ಲಿ ಕರ್ನಾಟಕ ಧಾಮಿರ್ಕ ಕಟ್ಟಡಗಳ (ಸಂರಕ್ಷಣೆ) ವಿಧೇಯಕ ಅಂಗೀಕಾರಕ್ಕೂ ಮುನ್ನ ನಡೆದ ಚರ್ಚೆಯಲ್ಲಿ, "ಕಾನೂನುಬಾಹಿರವಾಗಿ ಕಟ್ಟಿದ ದೇವಾಲಯ, ಮಸೀದಿ, ಚರ್ಚ್​ಗಳನ್ನು ಉಳಿಸುವುದು ಸರಿಯಲ್ಲ. ಸುಪ್ರೀಂಕೋರ್ಟ್​ ಆದೇಶಕ್ಕೆ ವಿರುದ್ಧವಾಗಿದೆ. ಮತ್ತಷ್ಟು ಅನಧಿಕೃತ ದೇವಾಲಯ ಹೆಚ್ಚಾಗಲು ಪುಷ್ಟಿ ನೀಡಿದಂತಾಗುತ್ತದೆ. ಧಾಮಿರ್ಕ ಕಟ್ಟಡ ಸಂರಕ್ಷಣಾ ವಿಧೇಯಕ ಸಂವಿಧಾನ ವಿರೋಧಿಯೆಂದು ಭಾವಿಸುತ್ತೇನೆ' ಎಂದು ಜೆಡಿಎಸ್​ನ ಮರಿತಿಬ್ಬೇಗೌಡ ಹೇಳಿದರು.

ಕಾಂಗ್ರೆಸ್​ನ ಬಿ.ಕೆ.ಹರಿಪ್ರಸಾದ್​, ಎಸ್​.ರವಿ, ಪ್ರತಿಪಕ್ಷ ಮುಖ್ಯ ಸಚೇತಕ ನಾರಾಯಣಸ್ವಾಮಿ, ಪ್ರತಿಪಕ್ಷ ನಾಯಕ ಎಸ್​.ಆರ್​.ಪಾಟೀಲ ಕೂಡ ಧ್ವನಿಗೂಡಿಸಿದರು. ಇದೆಲ್ಲವನ್ನೂ ಆಲಿಸಿದ ಸಚಿವರು, ಸಾರ್ವಜನಿಕ ಸ್ಥಳದಲ್ಲಿರುವ ಧಾಮಿರ್ಕ ಕಟ್ಟಡಗಳಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಇದು ಇಲ್ಲದೆ ಹೋದರೆ ಅಲ್ಲೋಲ ಕಲ್ಲೋಲ ಆಗಿಬಿಡುತ್ತದೆ.

ಮಸೀದಿ ಒಡೆಸಿದರೆ ಬಿಜೆಪಿಯವರು ಮಾಡಿಸಿದರು ಎನ್ನೋದು, ಯಾರೋ ದೇವಸ್ಥಾನ ಒಡೆದರೆ ಕಾಂಗ್ರೆಸ್​ನವರು ಒಡೆಸಿದರು ಎಂದು ಗದ್ದಲ ಶುರುವಾಗುತ್ತದೆ. ಎಲ್ಲೋ ಒಂದು ಕಡೆ ನಾವು ನಿದ್ದೆ ಮಾಡಿಬಿಟ್ಟೆವು. ಈಗ ದೇವಸ್ಥಾನ ಒಡೆದಾಗ ಎಚ್ಚರಗೊಂಡಿದ್ದೇವೆ. ಯಾವುದೇ ಅನಧಿಕೃತ ದೇವಸ್ಥಾನ ಸಕ್ರಮಗೊಳಿಸಲು ಹೋಗುತ್ತಿಲ್ಲ. ಸಂರಕ್ಷಣೆ ಮಾತ್ರ ನೀಡಲಾಗುತ್ತಿದೆ. ಸಮಾಜದಲ್ಲಾಗುವ ಏರುಪೇರು ತಡೆಯಲು ಈ ವಿಧೇಯಕ ತರಲಾಗಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net