

ವಿಜಯಪುರ: ಛಲವಾದಿ ನಾರಾಯಣ ಸ್ವಾಮಿ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವ ಪ್ರಯತ್ನದಲ್ಲಿರುವ ಬಿಜೆಪಿ ನಾಯಕರು ವಿನಾಕಾರಣ ಸಚಿವ ಡಾ. ಎಂ.ಬಿ. ಪಾಟೀಲರ ಮೇಲೆ ಕಳಂಕ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ರಾಜು ಆಲಗೂರ ಹೇಳಿದರು.
ಈ ಹಿಂದೆ ಬಿಜೆಪಿಯ ಅನೇಕ ನಾಯಕರು ಕೆಐಎಡಿಬಿ ನಿವೇಶನ ಪಡೆದುಕೊಂಡಿದ್ದಾರೆ. ಅರವಿಂದ ಬೆಲ್ಲದ ಮತ್ತು ಜಗದೀಶ ಶೆಟ್ಟರ್ ಅವರು ನಿವೇಶನಗಳನ್ನು ಪಡೆದಿದ್ದಾರೆ.
ಆದರೆ, ಅವರು ಯಾವುದೇ ಅಭಿವೃದ್ಧಿ ಮಾಡಿಲ್ಲ. ಅದೆಲ್ಲ ಮರೆಮಾಚಲು ಛಲವಾದಿ ನಾರಾಯಣಸ್ವಾಮಿ ಅವರನ್ನಿಟ್ಟುಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ದಲಿತರಿಗೆ ಅಪಮಾನ ಮಾಡುವ ಉದ್ದೇಶದಿಂದ ಎಂ.ಬಿ. ಪಾಟೀಲ ಅವರು ಛಲವಾದಿ ನಾರಾಯಣಸ್ವಾಮಿ ಅವರಿಗೆ ಶೆಡ್ ಗಿರಾಕಿ ಎಂಬ ಪದ ಉಪಯೋಗಿಸಿಲ್ಲ. ನಾರಾಯಣ ಸ್ವಾಮಿ ಸರ್ಕಾರಿ ಜಮೀನು ಪಡೆದು ಅಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಅಲ್ಲಿ ಶೆಡ್ ಮಾತ್ರ ಹಾಕಿದ್ದಾರೆ. ಹೀಗಾಗಿ ಅವರು ಶೆಡ್ ಪದ ಬಳಕೆ ಮಾಡಿದ್ದಾರೆ ಎಂದರು.
ಕಾಂಗ್ರೆಸ್ನ ರಾಷ್ಟೀಯ ಅಧ್ಯ ಮಲ್ಲಿಕಾರ್ಜುನ ರ್ಖಗೆ ಅವರ ಕುಟುಂಬದ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಮಾತನಾಡಿರುವುದು ಸರಿಯಲ್ಲ. ಬಿಜೆಪಿ ಅಧಿಕಾರದಲ್ಲಿ ಸಾವಿರಾರು ಎಕರೆ ಜಮೀನು ಹಂಚಿಕೆ ಮಾಡಿದ್ದಾರೆ.
ಇದೇ ನಾರಾಯಣ ಸ್ವಾಮಿ ಅವರನ್ನು ಬೆಳೆಸಲು ಮಲ್ಲಿಕಾರ್ಜುನ ರ್ಖಗೆ ಅನೇಕ ಅವಕಾಶಗಳನ್ನು ನೀಡಿದರು. ಅರಣ್ಯ ನಿಗಮದ ಅಧ್ಯರನ್ನಾಗಿ ಮಾಡಿದ್ದಾಗ ನಾರಾಯಣಸ್ವಾಮಿ ತಮ್ಮ ಮಗನಿಗೆ ಭೂಮಿ ಹಂಚಿಕೆ ಮಾಡಿದ್ದರು. ಇದು ಯಾವ ಕಾನೂನು? ಎಂದು ಪ್ರೊ. ರಾಜು ಆಲಗೂರ ಪ್ರಶ್ನಿಸಿದರು.
ಈಗ ಸಚಿವ ಎಂ.ಬಿ. ಪಾಟೀಲ ಅವರ ಹೆಸರಿಗೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಬಿಜೆಪಿ ಲೋಕಸಭಾ ಸದಸ್ಯರು ಏನೂ ಮಾಡಿಲ್ಲ ಎಂಬ ಕಾರಣಕ್ಕಾಗಿಯೇ ಖ್ಯಾತ ಸಮಾಜ ಸೇವಕಿ ಸುಧಾಮೂರ್ತಿ ಅವರು ಜಿಲ್ಲೆಯನ್ನು ನೋಡಲ್ ಜಿಲ್ಲೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.
ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ಮುಖಂಡರಾದ ಚಂದ್ರಶೇಖರ ಕೊಡಬಾಗಿ, ಸುರೇಶ ೂಣಸಗಿ, ಅಡಿವೆಪ್ಪ ಸಾಲಗಲ್ಲ, ವಸಂತ ಹೊನಮೋಡೆ, ಗಂಗಾಧರ ಸಂಬಣ್ಣಿ ಮತ್ತಿತರರಿದ್ದರು.