

ವಿಜಯಪುರ: ಐತಿಹಾಸಿಕ ನಗರದಲ್ಲಿ ರಸ್ತೆ ಅಭಿವೃದ್ಧಿ, ಕಂದಕದ ಹೂಳೆತ್ತುವುದು, ಚರಂಡಿ ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿಪರ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಶನಿವಾರ ಭೂಮಿ ಪೂಜೆ ನೆರವೇರಿಸಿದರು.
ಜಾಮೀಯಾ ಮಸೀದಿ ರಸ್ತೆಯ ರೊಡಗಿಮಡ್ಡಿ ಖಬರಸ್ಥಾನ ಹತ್ತಿರ ರಾಜ್ಯ ವಿಪತ್ತು ಉಪಶಮನ ನಿಧಿ ರೂ.200ಲಕ್ಷ ವೆಚ್ಚದಲ್ಲಿ ಕೋಟೆಗೋಡೆ ಕಂದಕ, ಮನಗೂಳಿ ಅಗಸಿಯಿಂದ ಕಸ್ತೂರಿ ಕಾಲನಿವರೆಗೆ ಹಾಗೂ ರೂ.100 ಲಕ್ಷ ವೆಚ್ಚದಲ್ಲಿ ರೊಡಗಿಮಡ್ಡಿ ಖಬರಸ್ಥಾನದಿಂದ ಸಿಂದಗಿ ರಸ್ತೆಯ ರೈಲ್ವೆ ಸೇತುವೆವರೆಗಿನ ಕಂದಕದಲ್ಲಿನ ಹೂಳು ತೆಗೆಯುವುದು, ಪ್ರವಾಹ ನಿಯಂತ್ರಣ ಕಾಮಗಾರಿ, ಇಂಡಿ ರಸ್ತೆ ಶಹಾಪೇಟೆ ಓಣಿ ಯಲ್ಲಮ್ಮ ದೇವಸ್ಥಾನದ ಹತ್ತಿರ ರಾಜ್ಯ ವಿಪತ್ತು ಉಪಶಮನ ನಿಧಿ ರೂ.200 ಲಕ್ಷ ವೆಚ್ಚದಲ್ಲಿ ಶಹಾಪೇಟೆ, ಸುಣಗಾರಗಲ್ಲಿಯಿಂದ ಸ್ಟೇಷನ್ ಹಿಂದಿನ ರಸ್ತೆ ಮೂಲಕ ಅಪ್ಸರಾ ಥೇಟರ್‌ವರೆಗೆ ಮಳೆ ನೀರು ಚರಂಡಿ ಕಾಮಗಾರಿ ಮತ್ತು ಪ್ರವಾಹ ನಿಯಂತ್ರಣ ಕಾಮಗಾರಿಗೆ ಚಾಲನೆ ನೀಡಿದರು.
ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವಿಠಲ ಕಟಕದೊಂಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಅಬ್ದುಲ್‌ಹಮೀದ ಮುಶ್ರೀಫ್, ಮಹಾನರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಪಾಲಿಕೆ ಅಭಿಯಂತರ ಇ.ಇ. ತಿಮ್ಮಪ್ಪ ಮತ್ತಿತರರಿದ್ದರು.