

ಧಾರವಾಡ: ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕರ್ನಾಟಕ ವಿಶ್ವವಿದ್ಯಾಲಯದ 70ನೇ ಅಂತರ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್ ಚಾಲನೆ ನೀಡಿದರು. 4 ಜಿಲ್ಲೆಗಳ ವ್ಯಾಪ್ತಿಯ ವಿಶ್ವವಿದ್ಯಾಲಯವಿದ್ದರೂ ಕಡಿಮೆ ಸಂಖ್ಯೆಯಲ್ಲಿ ಕ್ರೀಟಾಪಟುಗಳು ಭಾಗವಹಿಸಿದ್ದರಿಂದ ಸಚಿವ ಲಾಡ್, ಆಯೋಜಕರಿಗೆ ಕ್ಲಾಸ್ ತೆಗೆದುಕೊಂಡರು.
ಇದು ಕರ್ನಾಟಕ ವಿಶ್ವವಿದ್ಯಾಲಯ ಅಽÃನದ ೪ ಜಿಲ್ಲೆಗಳ ಅಂತರ ಕಾಲೇಜುಗಳ ಕ್ರೀಡಾಕೂಟ. ದಯವಿಟ್ಟು ಈ ರೀತಿ ಕಾಟಾಚಾರಕ್ಕೆ ಮಾಡಬೇಡಿ. ಯುವ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಒಂದೆರಡು ತಿಂಗಳು ಮೊದಲೇ ತಯಾರಿ ಮಾಡಿ ಅವಕಾಶ ನೀಡಬೇಕು. ಹಾಗಾದರೆ ಕ್ರೀಡಾಪಟುಗಳಿಗೂ ಆಸಕ್ತಿ ಇರುತ್ತದೆ. ಇಲ್ಲಿ ಸೇರಿರುವ ಕ್ರೀಡಾಪಟುಗಳಿಗೆ ಪಥಸಂಚಲನ ಮಾಡುವುದು, ಧ್ವಜ ಹೇಗೆ ಹಿಡಿಯಬೇಕು ಎಂಬುದೇ ಗೊತ್ತಿಲ್ಲದಿದ್ದರೆ ಹೇಗೆ? ಇಂಥ ಸಾಮಾನ್ಯ ಸಂಗತಿಗಳನ್ನು ಮೊದಲು ಕಲಿಸಿಕೊಡಿ. ಇಲ್ಲದಿದ್ದರೆ ಕ್ರೀಡಾಕೂಟ ಆಯೋಜಿಸುವುದಾದರೂ ಏಕೆ? ಸರ್ಕಾರದಿಂದ ಅಗತ್ಯ ಸಹಕಾರ ನೀಡಲು ನಾನು ಸಿದ್ಧ. ಕ್ರೀಡಾಕೂಟದಲ್ಲಿ ಗುಣಮಟ್ಟದ ಭಾಗವಹಿಸುವಿಕೆ ಅಗತ್ಯ. ಕವಿವಿ ಅಽÃನದಲ್ಲಿ ೨೮೦ ಪದವಿ ಕಾಲೇಜುಗಳಿದ್ದು, ಕೇವಲ ೮೧ ಕಾಲೇಜುಗಳ ವಿದ್ಯಾರ್ಥಿಗಳು ಭಾಗಹಿಸಿದ್ದಾರೆ. ಇದಕ್ಕೆ ಯಾರು ಜವಾಬ್ದಾರಿ? ಮುಂಬರುವ ದಿನಗಳಲ್ಲಿ ಅಚ್ಚುಕಟ್ಟಾಗಿ ಆಯೋಜಿಸಿ ಎಂದು ಆಯೋಜಕರಿಗೆ ಸೂಚಿಸಿದರು.