

ನೀವಿಬ್ಬರೂ ಸಿನಿಮಾ ಹಿರೋಗಳಾಗಬೇಕಿತ್ತು. ತಪ್ಪಿ ನಮ್ಮಂಥವರ ಕೈಗೆ ಬಂದಿದ್ದೀರಿ ಎಂದು ಸಚಿವ ಸಂತೋಷ ಲಾಡ್ ಅವರು ಇಬ್ಬರು ಐಎಎಸ್ ಅಽಕಾರಿಗಳನ್ನು ಹೊಗಳಿದರು. ಜಿಲ್ಲಾಽಕಾರಿ ಗುರುದತ್ತ ಹೆಗಡೆ ಮತ್ತು ಹೆಸ್ಕಾಂ ಎಂ.ಡಿ. ಮಹಮ್ಮದ ರೋಷನ್ ಅವರನ್ನು ಹೊಗಳಿದರು. ರೋಷನ್ ಅವರು ಗೃಹಜ್ಯೋತಿ ಕಾರ್ಯಕ್ರಮವನ್ನು ಚೆನ್ನಾಗಿ ಆಯೋಜಿಸಿದ್ದಾರೆ. ಅವರಿಗೆ ಸಂಗೀತದಲ್ಲಿಯೂ ಆಸಕ್ತಿ ಇದ್ದು, ಮ್ಯೂಸಿಕ್ ಕಂಪೋಸ್ ಮÁಡಿದ್ದಾರೆ. ಅವರು ಮತ್ತು ಗುರುದತ್ತ ಹೆಗಡೆ ಸಣ್ಣ ವಯಸ್ಸಿನಲ್ಲಿ ಐಎಎಸ್ ಮÁಡಿದ್ದಾರೆ. ಯುವಕರು ಆಡಳಿತ ಮತ್ತು ರಾಜಕಾರಣಕ್ಕೆ ಬರಬೇಕು. ಆಗ ಸುಧಾರಣೆಗಳಾಗುತ್ತವೆ ಎಂದರು.