ಬಿಜೆಪಿಗರ ಧಮ್ಮು, ತಾಕತ್ತು ಮಾತಿಗೆ ಸೀಮಿತ: ಕೃಷ್ಣ ಬೈರೇಗೌಡ

minister krishnabairegouda alliged bjp mps drought relief programme koppal visit
minister krishnabairegouda alliged bjp mps drought relief programme koppal visit
KRISHNABAIREGOUDA
Published on

ಕೊಪ್ಪಳ: ಬಿಜೆಪಿಗರು ಪ್ರಚಾರಕ್ಕಾಗಿ ಬರ ಅಧ್ಯಯನ ಮಾಡುವ ಬದಲು, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಪರಿಹಾರ ಕೊಡಿಸಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಗ್ರಹಿಸಿದರು.

ರಾಜ್ಯದ 233 ತಾಲೂಕು ಬರ ಪೀಡಿತವಾಗಿವೆ. 17 ಸಾವಿರ ಕೋಟಿ ರೂ. ಪರಿಹಾರ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ವಿಶೇಷ ಸಂದರ್ಭದಲ್ಲಿ ನರೇಗಾದಡಿ ಮಾನವ ದಿನಗಳನ್ನು 150ಕ್ಕೆ ಹೆಚ್ಚಿಸಲು ಅವಕಾಶವಿದೆ. ಈ ಬಗ್ಗೆಯೂ ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೆ, ಕೇಂದ್ರ ಸ್ಪಂದಿಸುತ್ತಿಲ್ಲ. 10 ಪತ್ರ ಬರೆದರೂ ಉತ್ತರ ಬಂದಿಲ್ಲವೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ದೇಶದ 12 ರಾಜ್ಯಗಳಲ್ಲಿ ಬರ ಇದೆ. ಮೊದಲು ವರದಿ ಸಲ್ಲಿಸಿದ್ದು ನಾವು. ಕೇಂದ್ರ ತಂಡವೂ ಮೊದಲು ನಮ್ಮ ರಾಜ್ಯದಲ್ಲಿ ಅಧ್ಯಯನ ಮಾಡಿದೆ. ಬಿಜೆಪಿಯವರಿಗೆ ರಾಜ್ಯದ ರೈತರ ಕಾಳಜಿ ಇದ್ದಲ್ಲಿ ಪರಿಹಾರ ತರಲು ಯತ್ನಿಸಲಿ. ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆ.

ಇವರ ಧಮ್ಮು, ತಾಕತ್ತು ಅದರಲ್ಲಿ ತೋರಿಸಲಿ. ದೆಹಲಿಗೆ ಹೋಗಲು ಬಿಜೆಪಿ ಸಂಸದರಿಗೆ ಧೈರ್ಯ, ಶಕ್ತಿ ಇಲ್ಲ. ಅದರ ಬದಲು ಪ್ರಚಾರಕ್ಕಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net