ಕೆಎನ್ನಾರ್​ ಅಮೃತಮಹೋತ್ಸವ ಮುಂದಕ್ಕೆ

KNR_AmruthaMahotsava
Published on

ತುಮಕೂರು: ದೇಶದಲ್ಲಿ ಯುದ್ಧ ಕಾಮೋರ್ಡ ಆವರಿಸಿರುವ ಹಿನ್ನೆಲೆ ಸಹಕಾರ ಸಚಿವ ಕೆ.ಎನ್​.ರಾಜಣ್ಣ ಅವರ ಅಮೃತ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವನ್ನು ಮುಂದೂಡಲಾಗಿದೆ.

ಕೆಎನ್ನಾರ್​ ಅಭಿಮಾನಿಗಳು, ಹಿತೈಷಿಗಳು, ಸಹಕಾರ ಕ್ಷೇತ್ರದ ವತಿಯಿಂದ ರಾಜಣ್ಣ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೇ13 ರಂದು ಅಮೃತ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವನ್ನು ಆಯೋಜಿಸಿದ್ದು ದೇಶದಲ್ಲಿ ಉದ್ಭವಿಸಿರುವ ಯುದ್ಧದ ಭೀತಿಯಿಂದಾಗಿ ಭಾರತೀಯ ಸೈನಿಕರಿಗೆ ಬೆಂಬಲವಾಗಿ ನಿಲ್ಲುವ ಉದ್ದೇಶದಿಂದ ಅಮೃತಮಹೋತ್ಸವವನ್ನು ಮುಂದೂಡಲಾಗಿದೆ ಎಂದು ವಿಧಾನಪರಿಷತ್​ ಸದಸ್ಯ ಆರ್​.ರಾಜೇಂದ್ರ ಶುಕ್ರವಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪೆಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯ ಪ್ರತಿಕಾರವಾಗಿ ಭಾರತೀಯ ಸೇನೆ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದು ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧದ ವಾತಾವರಣ ನಿಮಾರ್ಣವಾಗಿದೆ.ಇಂತಹ ಸಂದರ್ಭದಲ್ಲಿ ಭಾರತೀಯರೆಲ್ಲರೂ ಸೈನಿಕರೊಂದಿಗೆ ನಿಲ್ಲಬೇಕಾಗಿದೆ. ಹಾಗಾಗಿ ಮೇ13ರ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಉದ್ವಿಗ್ನ ಪರಿಸ್ಥಿತಿ ತಿಳಿಗೊಂಡ ನಂತರ ಕಾರ್ಯಕ್ರಮ ಮಾಡುವುದಾಗಿ ಸಿಎಂ, ಡಿಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದು ಅವರು ಒಪ್ಪಿಗೆ ಸೂಚಿಸಿರುವುದಾಗಿ ಸ್ಪಷ್ಟಪಡಿಸಿದರು.

ಅಭಿನಂದನಾ ಸಮಿತಿ ಅಧ್ಯಕ್ಷ ಎಸ್​.ನಾಗಣ್ಣ ಮಾತನಾಡಿ, ಸುಮಾರು 600 ಪುಟುಗಳ ಎರಡು ಸಂಪುಟಗಳನ್ನು ಒಳಗೊಂಡ ಕೆಎನ್ನಾರ್​ ಅಭಿನಂದನಾ ಗ್ರಂಥ ಮುದ್ರಣ ಆರಂಭವಾಗಿತ್ತು. ಆದರೆ, ದೇಶದಲ್ಲಿ ಯುದ್ಧ ಪರಿಸ್ಥಿತಿ ನಿಮಾರ್ಣವಾಗಿರುವ ಹಿನ್ನೆಲೆಯಲ್ಲಿ ಮೇ 13 ರ ಕಾರ್ಯಕ್ರಮ ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿಯೂ ಇಷ್ಟೇ ಆಸಕ್ತಿಯಿಂದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಅಭಿನಂದನಾ ಸಮಿತಿ ಮುರುಳಿಕೃಷ್ಣಪ್ಪ, ಎನ್​.ಗೋವಿಂದರಾಜು, ಗಂಗಣ್ಣ, ಕೆ.ಎ.ದೇವರಾಜು, ಧನಿಯಾಕುಮಾರ್​, ಲಕ್ಷಿ$್ಮನಾರಾಯಣ್​, ಕೊಟ್ಟ ಶಂಕರ್​, ಪಿ.ಮೂರ್ತಿ, ಡ್ಯಾಗೇರಹಳ್ಳಿ ವಿರೂಪಾಕ್ಷ, ನಾರಾಯಣಗೌಡ, ಟಿ.ಪಿ.ಮಂಜುನಾಥ್​ ಸೇರಿದಂತೆ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net