

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ನನಗೆ ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸಿ ಕೆಲಸ ಮಾಡುತ್ತೇನೆ. ಯಾವುದೇ ಸುಳ್ಳು ಕೇಸ್‌ಗಳಿಗೆ ನನ್ನ ಸಹಕಾರ ಇರುವುದಿಲ್ಲ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಕಾರ್ಯಕರ್ತರು, ಮುಖಂಡರು ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಶ್ರಮವಹಿಸಿ ಗೆಲುವಿಗೆ ಸಹಕರಿಸಿದ್ದು, ಸರ್ಕಾರದ 5 ಗ್ಯಾರಂಟಿಗಳಿಗೂ ಮಂತ್ರಿಮಂಡಲ ಅನುಮೋದನೆ ನೀಡಿದೆ. ಅದಕ್ಕೆ ಕೆಲವು ರೂಪುರೇಷೆಗಳನ್ನು ನೀಡಿದ ನಂತರ ಯಾರ‌್ಯಾರಿಗೆ ಇವು ದೊರಕಲಿವೆ ಎಂದು ತಿಳಿಸಲಾಗುತ್ತದೆ, ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸ್ಥಳೀಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ನಾಗೇಶ್ ಮಾತನಾಡಿ, ದೇವನಹಳ್ಳಿಯ ಯಾವುದೇ ಶಾಸಕರು ಇದುವರೆಗೆ ಸಚಿವ ಸ್ಥಾನ ಪಡೆದಿರಲಿಲ್ಲ. ಈಗ 7 ಬಾರಿ ಸಂಸದರಾಗಿ, 2ಬಾರಿ ಕೇಂದ್ರ ಸಚಿವರಾದ ಮುನಿಯಪ್ಪ ಅವರನ್ನು ಸಚಿವರನ್ನಾಗಿ ಮಾಡಿದೆ. ಇವರ ಎದುರಿಗೆ ಹಲವು ಸವಾಲುಗಳಿದ್ದು ಅವುಗಳನ್ನೆಲ್ಲಾ ಎದುರಿಸುವ ಶಕ್ತಿ ಅವರಲ್ಲಿದೆ ಎಂದರು.
ಕೆಪಿಸಿಸಿ ಸದಸ್ಯರಾದ ದ್ಯಾವರಹಳ್ಳಿ ಶಾಂತಕುಮಾರ್, ಚಿನ್ನಪ್ಪ, ನಾಗೇಗೌಡ, ಪುರಸಭಾ ಮಾಜಿ ಅಧ್ಯಕ್ಷ ಎಂ. ನಾರಾಯಣಸ್ವಾಮಿ, ಎಂ. ಮೂರ್ತಿ, ಜಿ.ಪಂ ಸದಸ್ಯರಾದ ಲಕ್ಷ್ಮೀನಾರಾಯಣ್, ಕೆ.ಸಿ.ಮಂಜುನಾಥ್, ಬಿದಲೂರು ಮುನಿರಾಜು, ರಾಮಪ್ರಸಾದ್, ಶ್ರೀನಿವಾಸ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಆರ್.ನಾಗೇಶ್ ಇದ್ದರು.