ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ; ಮುನೇನಕೊಪ್ಪ ಜೊತೆ ಮಾತನಾಡುವೆ

DSC_8862
Published on

ಧಾರವಾಡ: ಶಂಕರ ಪಾಟೀಲ ಮುನೇನಕೊಪ್ಪ ಪಕ್ಷ ಬಿಡಬಾರದು ಎಂಬುದು ನನ್ನ ಅಪೇಕ್ಷೆ. ಈಗಾಗಲೇ ಅವರೊಂದಿಗೆ ಮಾತನಾಡಿದ್ದು, ಇನ್ನೊಮ್ಮೆ ಮಾತನಾಡುತ್ತೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನೇನಕೊಪ್ಪ ಅವರು ನಮ್ಮ ಪಕ್ಷದ ಅತ್ಯಂತ ಹಿರಿಯ ಮುಖಂಡರು. ಕಳೆದ ಬಾರಿ ಜಿಲ್ಲೆಯಿಂದ ಏಕೈಕ ಸಚಿವರಾಗಿದ್ದರು. ಈಗ ಅವರ ಮಸ್ಸಿನಲ್ಲಿ ಏನಿದೆ? ಅವರ ಸಲಹೆಯನ್ನು ಕೇಳಿ ತಿಳಿದುಕೊಳ್ಳುತ್ತೇನೆ ಎಂದರು.
ದೇಶದಲ್ಲಿ ೩ನೇ ಬಾರಿ ನರೇಂದ್ರ ಮೋದಿ ಪ್ರಧಾನಿಯÁಗಬೇಕು ಎಂಬ ಅಪೇಕ್ಷೆ ಇದೆ. ಕಳೆದ ೬೦ ವರ್ಷಗಳಲ್ಲಿ ಆಗದ ಕೆಲಸ ೯ ವರ್ಷಗಳಲ್ಲಿ ಆಗಿವೆ. ಧಾರವಾಡ ಸೇರಿ ಎಲ್ಲ ಕಡೆ ಬಿಜೆಪಿ ಗೆಲ್ಲುತ್ತದೆ. ಕಾಂಗ್ರೆಸ್‌ನ ಕೆಲವರು ೧೮ರಿಂದ ೨೦ ಸ್ಥಾನ ಎಂದರೆ ಮತ್ತೆ ಕೆಲವರು ೧೧ರಿಂದ ೧೨ ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ೨೦೧೪ರಲ್ಲಿ ಸಿದ್ದರಾಮಯ್ಯ ಪೂರ್ಣಾವಽಯ ಸಿಎಂ ಆಗಿದ್ದರು. ಆಗ ೨೫ ಸ್ಥಾನ ಗೆಲ್ಲುತ್ತೇವೆವೆ ಎಂದಿದ್ದರು. ಆದರೆ, ನಾವು ೧೭ ಸ್ಥಾನ ಗೆದ್ದಿದ್ದೆವು. ೨೦೧೯ರಲ್ಲಿ ೨೫ ಸ್ಥಾನ ಗೆದ್ದಿದ್ದೆವೆ. ಈ ಬಾರಿಯೂ ೨೨ರಿಂದ ೨೫ ಸ್ಥಾನ ಗೆಲ್ಲುತ್ತೇವೆ ಎಂದರು.
ಜಗದೀಶ ಶೆಟ್ಟರ್ ಬಿಜೆಪಿ ಬಿಟ್ಟ ಬಳಿಕ ಬಿಜೆಪಿ ನಾಯಕರು ವಿಚಲಿತರಾಗಿದ್ದಾರಾ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಮಗೆ ವಿಧಾನಸಭೆಯಲ್ಲಿ ಹಿನ್ನಡೆಯÁಗಿದೆ. ಆದರೆ, ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ೪ ಸ್ಥಾನ ಗೆದ್ದಿದ್ದೇವೆ. ಜೊತೆಗೆ ೬೦,೦೦೦ ಮತಗಳಿಂದ ಮುನ್ನಡೆಯಲ್ಲಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net