ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆಆಗ್ರಹ

joshi MP
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:ನಗರದ ಗೋಕುಲದಲ್ಲಿ ಸರ್ಕಾರದಿಂದ ಮಂಜೂರಾದ 2 ಎಕರೆ ನಿವೇಶನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ವಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಚಿವ ] ಪ್ರಲ್ಹಾದ ಜೋಶಿಯವರು ಉನ್ನತ ಶಿಕ್ಷಣ ಸಚಿವ ]ೕ ಎಂ. ಸಿ. ಸುಧಾಕರ ಆವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪ್ರಸ್ತುತ ಕಾಲೇಜು ವಿದ್ಯಾರ್ಥಿಗಳು ಎಸ್. ಆರ್. ಬೊಮ್ಮಾಯಿ ಪ್ರೌಢಶಾಲಾ ಕಟ್ಟಡದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಒಂದೇ ಸ್ಥಳದಲ್ಲಿ ವ್ಯಾಸಂಗ ಮಾಡಲು ಕೊಠಡಿಗಳ ಅಭಾವ ಉಂಟಾಗಿದೆ ಎಂದು ಹೇಳಿದ್ದಾರೆ.

ರಾಜನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿದ್ದು ಅಲ್ಲಿ ಪ್ರವೇಶ ಬಯಸುವ ಬಡ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಹುಬ್ಬಳ್ಳಿ ನಗರ 12 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮಹಾನಗರವಾಗಿದ್ದು ಮತ್ತು ನಗರದ ಸುತ್ತಮುಲಿನ ಅನೇಕ ಹಳ್ಳಿಗಳಿಂದ ವಿದ್ಯಾರ್ಜನೆಗಾಗಿ ಹುಬ್ಬಳ್ಳಿ ನಗರಕ್ಕೆ ಬರುವ ಬಡ ವಿದ್ಯಾರ್ಥಿಗಳಿಗೆ ಪ್ರವೇಶ ದೊರಕಿಸುವ ಉದ್ದೇಶದಿಂದ ಈಗಿರುವ ರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಂತೆ ಹುಬ್ಬಳ್ಳಿ ನಗರದ ಗೋಕುಲದಲ್ಲಿ ಮತ್ತೊಂದು ಸುಸಜ್ಜಿತ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣ ಮಾಡಲು ಅವಶ್ಯಕ ಅನುದಾನ ಬಿಡುಗಡೆ ಮಾಡಲು ಕ್ರಮವಹಿಸುವಂತೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net