

ಬೋರಗಾಂವ: ಸಮೀಪದ ಮಾಣಕಾಪುರ ಗ್ರಾಮದ ಪಡಿತರ ಅಂಗಡಿಗೆ ಸಚಿವೆ ಶಶಿಕಾಲ ಜೊಲ್ಲೆ ಶನಿವಾರ ಭೇಟಿ ನೀಡಿ ಪಡಿತರ ಧಾನ್ಯವನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಪಡಿತರ ಅಂಗಡಿ ಮಾಲೀಕರು ನಿಗದಿತ ಸಮಯಕ್ಕೆ ಪಡಿತರ ವಿತರಿಸಬೇಕು. ವಿತರಿಸುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸಾರ್ವಜನಿಕರಿಂದ ಹಣ ವಸೂಲಿ ಮಾಡಬಾರದು. ನಿಯಮ ಮೀರಿದರೆ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ತಹಸೀಲ್ದಾರ್ ಪ್ರಕಾಶ ಗಾಯಕವಾಡ, ತಾಲೂಕು ವೈದ್ಯಾಧಿಕಾರಿ ವಿ.ವಿ. ಶಿಂಧೆ, ವೈದಾಧ್ಯಿಕಾರಿ ಸಂದೇಶ ರಾವಳುಕೇದಾರಿ, ಕಂದಾಯ ನಿರೀಕ್ಷಕ ಸಂಜಯ ನೇಮಣ್ಣವರ, ಪಿಡಿಒ ದಯಾನಂದ ಕಡಪಟ್ಟಿ ಇತರರು ಇದ್ದರು.