ಹಾಳಾದ ಸೇತುವೆ ವೀಕ್ಷಿಸಿದ ಸಚಿವ ಜಾರಕಿಹೊಳಿ

28 sanshi 2- Jarakiholi
Published on

 ಸಂಶಿ: ಶಿಗ್ಗಾಂವ- ಸವಣೂರ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರಕ್ಕೆ ಆಗಮಿಸಿದ್ದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅತ್ತಿಗೇರಿ ಮೂಲಕ ಸಂಶಿ ಗ್ರಾಮದ ನಡುವೆ ಹಾಳಾದ ಸೇತುವೆಯನ್ನು ಭಾನುವಾರ ವೀಕ್ಷಿಸಿದರು.

ನಂತರ ಮಾತನಾಡಿದ ಅವರು, ಸದ್ಯ ಕಾಮಗಾರಿ ಪ್ರಾರಂಭ ಮಾಡಲು ಒಂದು ಕೋಟಿ ರೂ. ಮಂಜೂರು ಮಾಡಲಾಗಿದೆ. ಇನ್ನು ಹೆಚ್ಚುವರಿ ಅನುದಾನ ಮಂಜೂರು ಮಾಡಲು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದರು.

ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಕೊಪ್ಪದ, ರೈತ ಮುಖಂಡರಾದ ಪರಮೇಶಪ್ಪ ನಾಯ್ಕರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ ಕುಮಾರ್ ಪಾಟೀಲ, ಕಾರ್ಯಾಧ್ಯಕ್ಷ ಜಗದೀಶ ಉಪ್ಪಿನ, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಾನಂದ ಬೆಂತೂರ, ನಿಂಗಪ್ಪ ಹಳ್ಳಿಕೇರಿ, ಬಸವರಾಜ್ ನಾಯ್ಕರ, ಗ್ರಾಪಂ ಸದಸ್ಯ ಯಲ್ಲಪ್ಪಗೌಡ ಪಾಟೀಲ, ಲೋಕೇಶ ಶರಾವರಿ, ಬಸುರಾಜ ಹೊಸಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net