ದಲೈ ಲಾಮಾ ಆರೋಗ್ಯ ವಿಚಾರಿಸಿದ ಸಚಿವ

13 A
Published on

ಮೈಸೂರು: ಪಿರಿಯಾಪಟ್ಟಣ ಸಮೀಪದ ಬೈಲುಕುಪ್ಪೆಯಲ್ಲಿ ವಾಸ್ತವ್ಯ ಹೂಡಿರುವ 14ನೇ ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೋಮವಾರ ಸೌಹಾರ್ದಯುತವಾಗಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಸಾಮಾಜಿಕ ಶಾಂತಿಯ ಜತೆಗೆ ಬುದ್ಧನ ತತ್ವಗಳನ್ನು ಪಸರಿಸುವ ಕೆಲಸ ಮಾಡುತ್ತಿರುವ ಅವರ ಕಾರ್ಯಗಳು ಮತ್ತು ಅವರ ವಿಚಾರಗಳ ಬಗ್ಗೆ ಕೆಲಹೊತ್ತು ಮಾತುಕತೆ ನಡೆಸಿದ ಸಚಿವರು ಅವರ ಬೇಡಿಕೆಗಳನ್ನು ಆಲಿಸಿ ಅವರ ಪ್ರೀತಿಯ ಆತಿಥ್ಯ ಸ್ವೀಕರಿಸಿದರು.

ಇದೇ ವೇಳೆ ಬುದ್ಧನ ನೆಲವಾಗಿ ರೂಪುಗೊಂಡಿರುವ ಬೈಲುಕುಪ್ಪೆಯಲ್ಲಿ ನಿರ್ಮಿಸಲಾದ ಬೌದ್ಧ ಮಂದಿರವನ್ನು ನಮ್ಮ ಆಪ್ತ ಸಿಬ್ಬಂದಿ ವರ್ಗದೊಡನೆ ವೀಕ್ಷಿಸಿದರಲ್ಲದೆ ಅಲ್ಲಿಯ ಸಮಸ್ಯೆಗಳ ಕುರಿತು ಚರ್ಚಿಸಿದರು.

ಭಾರತದ ಮೂಲ ಧರ್ಮವಾದ ಬೌದ್ಧ ಧರ್ಮದ ಬಗ್ಗೆ ಅಲ್ಲಿನ ಜನರಿಗೆ ಇರುವ ಸ್ಪಷ್ಟತೆ ಮತ್ತು ಕಾಳಜಿಯನ್ನು ಕಂಡು ಸಂತಸ ವ್ಯಕ್ತಪಡಿಸಿದ ಸಚಿವರು, ಬುದ್ಧನ ನಾಡು ಕಟ್ಟುವ ಪ್ರಾಮುಖ್ಯತೆಯನ್ನು ಅಲ್ಲಿನ ಬೌದ್ದ ಬಿಕ್ಕುಗಳ ಜೊತೆಗೆ ಚರ್ಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net