ಜೀವನದಲ್ಲಿ ಆರೋಗ್ಯ, ನೆಮ್ಮದಿಗಿಂತ ಮಿಗಿಲಾದ ಸಂಪತ್ತಿಲ್ಲ-ಸಚಿವ ಸತೀಶ ಜಾರಕಿಹೊಳಿ

photo-1.jpg
Published on



ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಒತ್ತಡ ಹಾಗೂ ವ್ಯವಹಾರಿಕ ಬದುಕಿನಲ್ಲಿ ಸಂಗೀತ ಮತ್ತು ಸಾಹಿತ್ಯ ಒಂದಷ್ಟು ಸಮಾಧಾನ ಮತ್ತು ಉಲ್ಲಾಸ ತರುತ್ತದೆ. ಜೀವನದಲ್ಲಿ ಆರೋಗ್ಯ, ನೆಮ್ಮದಿಗಿಂತ ಮಿಗಿಲಾದ ಸಂಪತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ "ರಫಿ ಕೇ ರಂಗ" "ರಿಯಾಜ್ ಕೇ ಸಂಗ್"  ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿಗಳನ್ನು ವಿತರಿಸಿ ಅವರು ಮಾತನಾಡಿದರು.
ಜೀವನದಲ್ಲಿ ನೊಂದಿರುವ ಹಿರಿಯರಿಗೆ ಸಂಗೀತ ಕೇವಲ ಮನರಂಜನೆ ಮಾತ್ರವಾಗಿರದೆ ಹೃದಯ ಸಂವಾದಿ ಚೇತನವಾಗುತ್ತದೆ. ಬುದ್ದಿ ಮತ್ತು ಮನಸ್ಸನ್ನು ಬೆಸೆಯುವ ಶಕ್ತಿ ಸಂಗೀತಕ್ಕಿದೆ. ಭಾರತೀಯ ಸಂಗೀತ ಪರಂಪರೆ ದೊಡ್ಡದು ಹಾಗೂವಿಧ್ಯಮಯವಾದದು.ಉತ್ತಮ ಸಂಗೀತ ಸಚೇತನ ಮತ್ತು ಸಾಮರಸ್ಯವನ್ನು ಉಂಟುಮಾಡುತ್ತದೆ ಎಂದರು.
ಶಾಸಕರಾದ ವಿಶ್ವಾಸ ವೈದ್ಯ, ಗಣೇಶ ಹುಕ್ಕೇರಿ, ಆಶಿಫ್ ಸೇಠ್, ಮಾಜಿ ಸಚಿವ ವೀರಕುಮಾರ ಪಾಟೀಲ್,  ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಯುವ ನಾಯಕ ರಾಹುಲ್ ಜಾರಕಿಹೊಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net