ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ಸಾಧನೆ; ಸಚಿವೆ ಹೆಬ್ಬಾಳ್ಕರ್ ಅಭಿಮತ

IMG202306211838362.jpg
Published on

ಬೆಳಗಾವಿ: ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ವಿಶೇಷವಾದ ಸಾಧನೆಯನ್ನು ಮಾಡಿ
ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ ಬೆಳಗಾವಿ :
 ಎಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ  ಲಕ್ಷ್ಮಿ
ಹೆಬ್ಬಾಳ್ಕರ್ ಹೇಳಿದರು.
ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಬುಧವಾರ ಜರುಗಿದ ಪದ್ಮಾವತಿ ಷಣ್ಮುಖಪ್ಪ
ಅಂಗಡಿ ಅವರ ಸ್ಮರಣಾರ್ಥ ಸ್ಥಾಪಿಸಲಾದ ಮಹಿಳಾ ರತ್ನ ಪ್ರಶಸ್ತಿಯನ್ನು
ಸಾಹಿತಿ ಶ್ರೀಮತಿ ನೀಲಗಂಗಾ ಚಿರಂತಿಮಠ ಮತ್ತು ಬೆಳಗಿಯ ಅಕ್ಕನ ಬಳಗದ ಅಧ್ಯಕ್ಷ ಶ
ಕಮಲಕ್ಕ ಸೊಂಟ ಅವರಿಗೆ ಪ್ರಧಾನ ಮಾಡಿ ಮಾತನಾಡಿದರು.
ಮಕ್ಕಳ ವಿಶೇಷವಾಗಿ ಹೆಣ್ಣು ಮಕ್ಕಳ ಸಾಧನೆಯಲ್ಲಿ ತಾಯಿಯ ಪಾತ್ರ ಬಹು ಮುಖ್ಯವಾಗಿರುತ್ತದೆ
ತಾಯಿ ನೀಡುವ ಸಂಸ್ಕೃತಿ ಸಂಸ್ಕಾರ ಮತ್ತು ಪರಂಪರೆ ಯಿಂದಾಗಿ ಹೆಣ್ಣು ಮಕ್ಕಳು ವಿಶೇಷವಾದ
ಸಾಧನೆ ಮಾಡಲು ಸಾಧ್ಯವಾಗುತ್ತದೆ ಈ ರೀತಿಯ ಸಂಸ್ಕಾರ ನೀಡುವ ಪರಂಪರೆ ಮುಂದುವರಿಯಬೇಕು ಎಂದು ಹೇಳಿದರು.
63 ವರ್ಷದ ಹಿಂದೆ ತೀರಿಹೋದ ಪದ್ಮಾವತಿ ಅಂಗಡಿಯವರ ಸಾಧನೆಯನ್ನು ಇವತ್ತಿಗೂ ನಾವು
ನೆನಪಿಸಿಕೊಳ್ಳುತ್ತಿದ್ದೇವೆ ಬಿಡಿಸಿ ಬ್ರಿಟಿಷರಿಂದ ಮ್ಯಾಜಿಸ್ಟ್ರೇಟ್ ಪದವಿ ಏರಿದ ಶ್ರೀಮತಿ
ಪದ್ಮಾವತಿ ಸಾಧನೆ ಅಂದಿನ ಕಾಲಕ್ಕೆ ಅದ್ವಿತೀಯವಾಗಿತ್ತು, ಯಾವ ಮನೆಯಲ್ಲಿ ಹೆಣ್ಣು ಮಕ್ಕಳ
ಕಲ್ಬುರ್ಗಿ ವಿಶ್ವವಿದ್ಯಾಲಯದ
ವಿಶ್ರಾಂತ ಪ್ರಾಧ್ಯಾಪಕಿ ಉಜ್ವಲಾ ಹಿರೇಮಠ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ
ತಾಯಿಯ ಸಾಧನೆಯನ್ನು ನೆನಪಿಸಿಕೊಂಡರು. ಶ್ರೀಮತಿ ಮೈತ್ರಾಯಿಣಿ ಗದಿಗೆಪ್ಪಗೌಡರ್ ಉಪನ್ಯಾಸ
ನೀಡಿದರು.
ಇದೇ ಸಂದರ್ಭದಲ್ಲಿ ಪರೀಕ್ಷೆಯಲ್ಲಿ 369ನೇ ರಾಂಕ್ ಪಡೆದ ಅರಭಾವಿಯ  ಶ್ರತಿ ಯರಗಟ್ಟಿ,
ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆ ಗಳಾದ ಪ್ರೌಢಶಾಲೆ ಹಾಗೂ ಪದವಿ ಪೂರ್ವ ವಿದ್ಯಾಲಯಗಳಲ್ಲಿ
ಪ್ರಥಮ ಸ್ಥಾನ ಪಡೆದ  ವಿದ್ಯಾರ್ಥಿನಿಯರನ್ನು  ಸತ್ಕರಿಸಲಾಯಿತು.
ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ. ಅಲ್ಲಮ ಪ್ರಭು ಮಹಾಸ್ವಾಮೀಜಿ,
ಕೆ.ಬಿ. ಹಿರೇಮಠ, ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಕಾರ್ಯದರ್ಶಿ ಅಶೋಕ
ಮಳಗಲಿ, ಪ್ರೊಫೆಸರ್ ಮಂಜುನಾಥ ಶರಣಪ್ಪನವರ್, ಸಹಾಯಕಅಧ್ಯಾಪಕರಾದ ಶಅನಿತಾ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net