ಸಿಎಂ‌‌ ಆಗಲು ಅರ್ಹತೆ ಬೇಕು, ಸಚಿವ ಎಚ್.ಕೆ.ಪಾಟೀಲ್ ಪರೋಕ್ಷ‌ ಟಾಂಗ್

minister-h-k-patil-100 village courts establish soon says koppal
minister h.k.patil
Published on

ಕೊಪ್ಪಳ: ಸದ್ಯ ಸಿಎಂ ಸ್ಥಾನ ಖಾಲಿ ಇಲ್ಲ. ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಟ್ಟರೆ ಸಾಲದು. ಅದಕ್ಕೆ ತಕ್ಕಂತೆ ಬೆಳೆಯಬೇಕು ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಪರೋಕ್ಷ ಟಾಂಗ್ ನೀಡಿದರು.

ಕಾಂಗ್ರೆಸ್ ನಲ್ಲಿ ಆಂತರಿಕ ಬೇಗುದಿ ಇಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ನಾನು ಗದಗನಲ್ಲಿದ್ದೆ. ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ನನಗೆ ಆಹ್ವಾನ ಬಂದಿಲ್ಲ. ನಿನ್ನೆ ಸಿಎಂ ಗದಗಿನಲ್ಲಿ ಇದ್ದರು ಎಂದರು.

ನಾನು ಸಿಎಂ‌ ಆಗಲು ರೆಡಿ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಹೈಕಮಾಂಡ್‌ ಯಾರಿಗೆ ಅವಕಾಶ ಕೊಡುತ್ತದೆ, ಜನರು ಯಾರಿಗೆ ಅಶೀರ್ವಾದ ಮಾಡುತ್ತಾರೋ ಅವರು ಸಿಎಂ ಆಗುತ್ತಾರೆ.

ಸಿಎಂ ಹುದ್ದೆಗೆ ಖಾಲಿ ಇದ್ದರೆ ರೇಸ್‌ ಇರುತ್ತದೆ. ಸಿಎಂ ಹುದ್ದೆ ಖಾಲಿ ಇಲ್ಲ. ಸಿಎಂ ಆಗೋದು ಆಸೆ ಪಟ್ಟು ತೆಗೆದುಕೊಳ್ಳೋದಲ್ಲ. ಅದಕ್ಕಾಗಿ ಆ ಎತ್ತರಕ್ಕೆ ಬೆಳೆಯಬೇಕು ಎಂದು ಸಿಎಂ ಹುದ್ದೆ ಮೇಲೆ ಕಣ್ಣಿಟ್ಟವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಕೊಪ್ಪಳದಲ್ಲಿ ಜಿಲ್ಲಾ ನ್ಯಾಯಾಲಯ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾಧ್ಯಮದವರೊಂದಿಗೆ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net