ಹತಾಶೆಯಿಂದ ಎಚ್‌ಡಿಕೆ ಹೇಳಿಕೆ

Untitled design(23)
ಸಿಂಧನೂರಿನ ಆರ್‌ಜಿಎಂ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ವಿವಿಧ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಶಂಕುಸ್ಥಾಪನೆ ನೆರವೇರಿಸಿದರು. ಶಾಸಕರಾದ ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಪುರ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಎಸ್ಪಿ ಬಿ.ನಿಖಿಲ್ ಇದ್ದರು.
Published on

ಸಿಂಧನೂರು: ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಭ್ರಷ್ಟಾಚಾರ ಸಾಕಷ್ಟಿದೆ. ಈಗ ನಮ್ಮ ಸರ್ಕಾರದ ಮೇಲೆ ಗೂಬೆ ಕೂಡಿಸುವುದರಲ್ಲಿ ಅರ್ಥವಿಲ್ಲ. ಅವರ ಹೇಳಿಕೆಯಲ್ಲೂ ಹುರುಳಿಲ್ಲ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದರು.

ಜೆಡಿಎಸ್ ಬಂದಾಗೆಲ್ಲ ಭ್ರಷ್ಟಾಚಾರ

ನಗರದಲ್ಲಿ ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌ಡಿಕೆ ಮಾಡಿರುವ ಭ್ರಷ್ಟಾಚಾರದ ಆರೋಪ ನಿರಾಧಾರ. ಅವರ ಸರ್ಕಾರವಿದ್ದಾಗ ಯಾವ ರೀತಿ ಆಡಳಿತವಿತ್ತು ಎಂಬುದು ಗೊತ್ತಿದೆ. ಜೆಡಿಎಸ್ ಬಂದಾಗೆಲ್ಲ ಭ್ರಷ್ಟಾಚಾರ ನಡೆದಿದ್ದಿದೆ. ಕಾಂಗ್ರೆಸ್‌ನಿಂದಲೇ ಅವರು ಸಿಎಂ ಆಗಿದ್ದರು ಎಂಬದನ್ನು ಎಚ್‌ಡಿಕೆ ಮರೆತಂತಿದೆ. ಅವರಿಂದ ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ. ಈ ಹತಾಶೆಯಿಂದ ಹೀಗೆ ಹೇಳಿರಬಹುದು ಎಂದರು.

ನಮ್ಮದು ಕ್ಲೀನ್‌ಚೀಟ್ ಸರ್ಕಾರ

ನಮ್ಮದು ಕ್ಲೀನ್‌ಚೀಟ್ ಸರ್ಕಾರ. ಭ್ರಷ್ಟಾಚಾರದ ಮಾತಿಲ್ಲ. ಶೇ.40 ಕಮಿಷನ್ ಪಡೆದ ಹಿಂದಿನ ಬಿಜೆಪಿ ಸರ್ಕಾರಕ್ಕೆ ಜನರೇ ತಕ್ಕಪಾಠ ಕಲಿಸಿದ್ದಾರೆ. ಸಿ.ಟಿ.ರವಿ ಹೇಳಿಕೆಯೂ ನಿರಾಧಾರ. ಸಂಘದ ದೋಷದಿಂದ ಇಂಥ ಹೇಳಿಕೆಗಳು ಬರುತ್ತವೆ. ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಸರ್ಕಾರದ ಎಲ್ಲ ಯೋಜನೆಗಳೂ ಸುಸೂತ್ರವಾಗಿ ನಡೆಯುತ್ತಿವೆ ಎಂದರು.

ಇದನ್ನೂ ಓದಿ:

ಶಾಸಕರಾದ ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರ್ವಿಹಾಳ, ವಿಪ ಸದಸ್ಯ ಶರಣಗೌಡ ಬಯ್ಯಪುರ, ಡಿಸಿ ಚಂದ್ರಶೇಖರ ನಾಯಕ, ಎಸ್ಪಿ ಬಿ.ನಿಖಿಲ್, ಸಿಇಒ ಅವಿನಾಶ ಶಿಂಧೆ, ಎಸಿ ರಾಹುಲ್ ಸುಂಕನೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net