ಸಚಿವರು ರಾಜೀನಾಮೆ ನೀಡಲಿ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸವಾಲು

DKshi
Published on

ಮಂಗಳೂರು: ರಾಜ್ಯ ಸರ್ಕಾರದಲ್ಲಿ ಈಗ ಸಚಿವರಿಗೆ ಮುಖ್ಯಮಂತ್ರಿ ಬಗ್ಗೆ ವಿಶ್ವಾಸ ಇಲ್ಲ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎಂ ವಿರುದ್ಧ ಸಚಿವರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ಸದ್ಯದ ಆಡಳಿತ ಸರಿ ಇಲ್ಲ ಎನ್ನುವುದನ್ನು ಅವರು ಬಿಂಬಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ಸಚಿವರು ಸರಿ ಇಲ್ಲ, ಆಡಳಿತ ಸರಿ ಇದೆ ಅಂದ್ರೆ ಮುಖ್ಯಮಂತ್ರಿ ಅವರು ಸಚಿವರನ್ನು ಉಚ್ಚಾಟಿಸಲಿ ಅಥವಾ ಮಂತ್ರಿಗಳೇ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಲಿ ಎಂದರು.

ಬಿಜೆಪಿಯ ಹಿರಿಯ ಸಚಿವರು ದೂರು ನೀಡಿದ್ದಾರೆ. ಅದರಲ್ಲೂ ಪ್ರಮಾಣ ವಚನ ಬೋಧಿಸಿದವರಿಗೆ ದೂರು ನೀಡಿದ್ದು ಮುಖ್ಯಮಂತ್ರಿ ಅವರ ಮೇಲೆ ವಿಶ್ವಾಸ ಇಲ್ಲ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಮೂರು, ಆರು ತಿಂಗಳಿಗೆ ಅಧಿಕಾರಿಗಳ ಬದಲಾವಣೆಯಾಗುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net